Header Ads
Header Ads
Breaking News

ಹರ್ಮಿನ್ ಪ್ರೀತ್ ಕೌರ್ ಭರ್ಜರಿ 171 ರನ್, ಮಹಿಳಾ ವಿಶ್ವ ಕಪ್ ಫೈನಲ್‌ಗೆ ಭಾರತ

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಂಗ್ಲರ ನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ೧೧ನೇ ಮಹಿಳಾ ವಿಶ್ವಕಪ್ ಕ್ರಿಕೆಟ್ ಕೂಟದ ಎರಡನೇ ಸೆಮಿಫೈನಲ್ ಪಂದ್ಯಾಟದಲ್ಲಿ ಹಾಲಿ ಚಾಂಪಿಯನ್ ಆಗಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ೩೬ ರನ್ನುಗಳಿಂದ ಸದೆಬಡಿಯುವ ಮೂಲಕ ಭಾರತೀಯ ಮಹಿಳಾ ಪಡೆ ಎರಡನೇ ಬಾರಿಗೆ ವಿಶ್ವಕಪ್ ಫೈನಲಿಗೆ ಲಗ್ಗೆಯಿರಿಸಿದೆ.
ಹರ್ಮಿನ್ ಪ್ರೀತ್ ಕೌರ್ ಅವರ ಭರ್ಜರಿ ೧೭೧ ಬ್ಯಾಟಿಂಗ್ ನೆರವಿನೊಂದಿಗೆ ಭಾರತವು ೪೨ ಓವರುಗಳಲ್ಲಿ ೪ ವಿಕೆಟ್ ನಷ್ಟದಲ್ಲಿ ೨೮೧ ರನ್ನುಗಳ ಸವಾಲಿನ ಮೊತ್ತವನ್ನು ಪೇರಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸೀಸ್ ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವನ್ನು ಆಡುವಲ್ಲಿ ವಿಫಲಗೊಂಡಿತು. ಆಸೀಸ್ ಪಾಳಯದ ಆರಂಭಿಕ ಕ್ರಮಾಂಕದ ವೈಫಲ್ಯದಿಂದಾಗಿ ಮತ್ತು ಭಾರತೀಯ ಬೌಲರ್ಗಳ ಶಿಸ್ತುಬದ್ಧ ದಾಳಿಯಿಂದಾಗಿ ಸವಾಲಿನ ಮೊತ್ತವನ್ನು ಬೆನ್ನಟ್ಟಲು ಆಸೀಸ್ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ.
ಆಸೀಸ್ ಪಾಳಯದಲ್ಲಿ ಅಲೆಕ್ಸ್ ಬ್ಲ್ಯಾಕ್ವೆಲ್ ಅವರದ್ದು ಏಕಾಂಗಿ ಹೋರಾಟವಾಗಿತ್ತು. ಕೊನೆಯವರಾಗಿ ಔಟಾಗುವ ಮುನ್ನು ಈ ಆಟಗಾರ್ತಿ ಕೇವಲ ೫೬ ಎಸೆತಗಳಲ್ಲಿ ೯೦ ರನ್ನುಗಳನ್ನು ಬಾರಿಸಿ ಮಿಂಚಿದರು. ಉಳಿದಂತೆ ಇ.ಜೆ. ವಿಲಾನಿ ೭೫, ಪೆರಿ ೩೮ ಅವರಿಂದ ಮಾತ್ರವೇ ಎರಡಂಕೆಯ ಮೊತ್ತ ದಾಖಲಾಯಿತು. ಆಸ್ಟ್ರೇಲಿಯಾ ವನಿತೆಯರು ೪೦ ಓವರುಗಳಲ್ಲಿ ೨೪೫ ರನ್ನುಗಳಿಗೆ ಆಲೌಟ್ ಆಗುವ ಮೂಲಕ ಸತತ ಎರಡನೇ ಬಾರಿಗೆ ಹಾಗೂ ದಾಖಲೆಯ ಏಳನೇ ಬಾರಿ ವಿಶ್ವಕಪ್ ಟ್ರೋಫಿ ಎತ್ತುವ ಕನಸು ನುಚ್ಚುನೂರಾಯಿತು.

Related posts

Leave a Reply