Header Ads
Breaking News

ಹರ್ಷಾದ್ ವರ್ಕಾಡಿ ಅವರಿಂದ ವಿವಿಧ ಯೋಜನೆಗಳ ಉದ್ಘಾಟನೆ

ಕಾಸರಗೋಡು ಜಿಲ್ಲಾ ಪಂಚಾಯತು ನಿಧಿಯಿಂದ ಮೀಂಜ ಗ್ರಾಮ ಪಂಚಾಯತಿನ ವಿವಿಧೆಡೆ ನಿರ್ಮಿಸಲಾದ ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್  ವರ್ಕಾಡಿ ಯೋಜನೆಗಳನ್ನು ಉದ್ಘಾಟಿಸಿದರು. ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಶಂಷದ್  ಶುಕೂರ್ ಅಧ್ಯಕ್ಷತೆ ವಹಿಸಿದ್ದರು.
ಮೀಯಪದವಿನಲ್ಲಿ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಲಾಂಜ್ ಕಟ್ಟಡ, 10.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೂಡಂಬೈಲು ವಿಸಿಬಿ ಹಾಗೂ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುಳೂರು ಕೋಣಿಮಾರ್ ವಿಸಿಬಿ ಕಟ್ಟಡ ಲೋಕಾರ್ಪಣೆಗೊಂಡಿತುಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳಾದ ಮೊಹಮ್ಮದ್ ಕುಂಞ ಚಂದ್ರಾವತಿ ವಿ.ಪಿ ಚಂದ್ರಾವತಿ ಮೂಡಂಬೈಲು, ಕುಸುಮಾ ಮುಂತಾದವರು ಭಾಗವಹಿಸಿದರು.

Related posts

Leave a Reply

Your email address will not be published. Required fields are marked *