Header Ads
Breaking News

 ಹಲ್ಲಾಬೋಲ್-ಸಪ್ದರ್ ಹಾಶ್ಮಿ ನೆನಪಲ್ಲಿ ಸಂವಾದ ಕಾರ್ಯಕ್ರಮ

ಇವತ್ತು ರಂಗ ಚಳುವಳಿ ಗಟ್ಟಿಯಾಗಿ ನೆಲೆವೂರಲು ಕಾರಣ ಆದರ ಆಳದಲ್ಲಿರುವ ಪ್ರತಿರೋಧದಿಂದ, ವ್ಯವಸ್ಥೆ ವಿರುದ್ಧದ ಧ್ವನಿಗಳಿಂದ ಅದು ಧಮನಿತರ, ಶೋಷಿತರ, ಕಾರ್ಮಿಕರ ಪರವಾದ ಗಟ್ಟಿ ದನಿಯಾದುದರಿಂದ. ಇದಕ್ಕೆ ಮುಖ್ಯ ಕಾರಣಕರ್ತರಲ್ಲಿ ಒಬ್ಬರಾದವರು ಕಲೆಯನ್ನು ಪ್ರತಿರೋಧದ ಮಾಧ್ಯಮವನ್ನಾಗಿಸಿದ ನಾಟಕಕಾರ, ಕವಿ, ನಟ, ಬೀದಿ ನಾಟಕಗಳ ಹರಿಕಾರ ಸಪ್ದರ್ ಹಾಶ್ಮಿ. ಹಲ್ಲಾಬೋಲ್ ಆತನ ಸಾವು ಮತ್ತು ಬದುಕಿನ ಕತೆ. ಈ ಕತೆಯನ್ನು ಹಿನ್ನಲೆಯಾಗಿರಿಸಿಕೊಂಡು ಸಂವಾದ ಕಾರ್ಯಕ್ರಮವನ್ನು ಉಡುಪಿಯ ಖ್ಯಾತ ಸಾಂಸ್ಕೃತಿಕ ವೇದಿಕೆ, ರಥಬೀದಿ ಗೆಳೆಯರು (ರಿ) ಆಶ್ರಯದಲ್ಲಿ ತಾ. 09.01.2021 ಶನಿವಾರ ಅಪರಾಹ್ನ 2.30 ರಿಂದ ಉಡುಪಿ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ರಂಗನಟಿ, ಸಾಹಿತಿ ಡಾ| ಮಾಧವಿ ಎಸ್. ಭಂಡಾರಿ ಮಾಡಲಿರುವರು, ಬೈಂದೂರಿನ ಶಿಕ್ಷಕ ಶ್ರೀ ರಾಘವೇಂದ್ರ ಕೆ. ಇವರ ಸಪ್ದರ್ ನೆನಪುಗಳನ್ನು ಹಂಚಿ ಕೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಲಿದ್ದಾರೆ.

ನಂತರ ಜರಗುವ ಬೀದಿ ನಾಟಕಗಳ ಪರಂಪರೆ ಪ್ರಯೋಗ ಮತ್ತು ಮೌಲಿಕತೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಮೋಹನ್‌ಚಂದ್ರ ಮಂಗಳೂರು, ಶ್ರೀ ಪ್ರಸಾದ್ ರಕ್ಷಿದಿ, ಶ್ರೀ ಐಕೆ ಬೊಳುವಾರು ವಿಷಯ ಮಂಡನೆ ಮಾಡಲಿದ್ದಾರೆ. ಸಮುದಾಯ ಕುಂದಾಪುರ ಅಧ್ಯಕ್ಷರಾದ ಶ್ರೀ ಉದಯ ಗಾಂವ್ಕರ್ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ.
ಯುವ ರಂಗಕರ್ಮಿಗಳಾದ ಶ್ರೀ ಯೋಗೇಶ್ ಬಂಕೇಶ್ವರ, ಶ್ರೀ ಕ್ರಿಸ್ಟೋಫರ್ ಡಿ’ಸೋಜಾ, ಶ್ರೀ ವಿದ್ಧು ಉಚ್ಚಿಲ, ಶ್ರೀ ವಿಘ್ನೇಶ್ ಹೊಳ್ಳ ತೆಕ್ಕಾರು, ಶ್ರೀ ಭುವನ್ ಮಣಿಪಾಲ, ಕು| ಶಿಲ್ಪಾ ಶೆಟ್ಟಿ ಇವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಸಮುದಾಯ ಕುಂದಾಪುರದ ಸತ್ಯನಾ ಕೊಡೇರಿ, ವಾಸು ಗಂಗೇರ ಮತ್ತು ತಂಡ ಜನಮನದ ಹಾಡುಗಳನ್ನು ಹಾಡಲಿದ್ದಾರೆ.ಕೋವಿಡ್-19 ಸುರಕ್ಷತಾ ಮಾರ್ಗ ಸೂಚಿಗಳಂತೆ ಜರಗುವ ಈ ಭಿನ್ನ ಕಾರ್ಯಕ್ರಮದಲ್ಲಿ ಉಡುಪಿ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲ ಭಾಗವಹಿಸಬೇಕೆಂದು ಉಡುಪಿ ರಥಬೀದಿ ಗೆಳೆಯರು(ರಿ) ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಮತ್ತು ಕಾರ್ಯದರ್ಶಿಗಳಾದ ಪ್ರೊ. ಸುಬ್ರಹ್ಮಣ್ಯ ಜೋಶಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

Leave a Reply

Your email address will not be published. Required fields are marked *