Header Ads
Breaking News

ಹಳದಿ ರೋಗದಿಂದ ಕಂಗೆಟ್ಟ ಮಲೆನಾಡಿನ ಕೃಷಿಕರಿಗೆ ಆಶಾದಾಯಕವಾದ ತಾಳೆ ಕೃಷಿ; ಕಡಿಮೆ ಖರ್ಚು, ಸರಕಾರದ ಪ್ರೋತ್ಸಾಹದಿಂದ ತಾಳೆ ಬೆಳೆದು ಯಶಸ್ವಿ

ವಾಣಿಜ್ಯ ಬೆಳೆಗಳಿಗೆ ಹೆಸರಾದ ಸುಳ್ಯದಲ್ಲಿ ಈಗ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕೆ ಕಾರಣ ತಾವು ಬೆಳೆದ ಅಡಕೆ ಕೃಷಿಗೆ ತಗಲುವ ವಿವಿಧ ರೋಗಗಳು ಜೊತೆಗೆ ಬೆಲೆ ಕುಸಿತ, ಕಾರ್ಮಿಕರ ಕೊರತೆ, ನಿರ್ವಹಣೆ ವೆಚ್ಚದ ಹೊರೆ, ಮಾರುಕಟ್ಟೆ ಭೀತಿ ಹಾಗೂ ಕಾಡುಪ್ರಾಣಿಗಳ ಉಪಟಳ. ಇದಕ್ಕೆಲ್ಲ ಚಿಂತಿಸುವವರಿಗೆ ಇಲ್ಲಿದೆ ಪರಿಹಾರ.

 

ಅಡಕೆ, ತೆಂಗು, ರಬ್ಬರ್‍ಗೆ ಪರ್ಯಾಯವಾಗಿ ತಾಳೆ ಬೆಳೆ ಕೈ ಹಿಡಿಯುವ ಸಾಧ್ಯತೆ ಹೆಚ್ಚು. ಪರ್ಯಾಯ ಬೆಳೆಯಾಗಿ ತಾಳೆ ಬೆಳೆ ಬೆಳೆಯುವುದು ಸೂಕ್ತ ಎಂಬ ಅಭಿಪ್ರಾಯಗಳು ಈ ಭಾಗದ ಕೃಷಿಕರಿಂದ ಈಗ ಕೇಳಿ ಬರುತ್ತಿದೆ. ಸದ್ಯದ ಸ್ಥಿತಿಯಲ್ಲಿ ಅಡಕೆಯ ಬದಲು ಪರ್ಯಾಯವಾಗಿ ತಾಳೆ ಬೆಳೆ ಸೂಕ್ತ ಎಂಬ ವಾದ ಇದೆ. ಇದಕ್ಕೆ ಸಾಕ್ಷಿ ಇಲ್ಲಿನ ಪ್ರಗತಿ ಪರ ಕೃಷಿಕ ತೊಡಿಕಾನದ ಕೃಷಿ ಪಧವೀಧರ ವಸಂತ ಭಟ್. 2012ರಲ್ಲಿ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಹಳದಿ ರೋಗ ಕಾಣಿಸಿಕೊಂಡು ಫಸಲು ನಾಶವಾದಾಗ ಇವರು ಸ್ವತ: ಚಿಂತನೆ ನಡೆಸಿ ಅದೇ ಸ್ಥಳದಲ್ಲಿ ತಾಳೆ ಬೆಳೆ ಬೆಳೆದಿದ್ದರು. ಆ ಮೂಲಕ ಫಸಲು ಬೆಳೆದು ಅದರಲ್ಲಿ ಅವರು ಯಶಸ್ವಿಯಾಗಿದ್ದರು. ಈಗಲೂ ಇದೇ ಬೆಳೆಯನ್ನು ಮುಂದುವರೆಸಿದ್ದಾರೆ.

 

ಜಿಲ್ಲೆಯಲ್ಲಿ ಈ ಹಿಂದೆ ಅಡಕೆಗೆ ರೋಗ ತಗುಲಿ ಬೆಳೆ ಕುಂಠಿತವಾದಾಗ ಹಲವು ರೀತಿಯ ಸಂಶೋಧನೆ ಮುಂದಾಗಿದ್ದರು ನಮ್ಮ ಜಿಲ್ಲೆಯ ಕೃಷಿಕರು. ಅನಂತರದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ವಾತವಾವರಣ ತಾಳೆ ಬೆಳೆಗೆ ಸೂಕ್ತ ಎಂಬುದು ಮನದಟ್ಟಾಗುತ್ತಿದ್ದಂತೆ ಇದೇ ಬೆಳೆ ಬೆಳೆಯಲು ಸರಕಾರವೇ ಪ್ರೋತ್ಸಾಹ ನೀಡಿತ್ತು. ಅದೇ ಕಾರಣದಿಂದ ಜಿಲ್ಲೆಯಲ್ಲಿ ಈಗ ಹಲವೆಡೆ ತಾಳೆ ಬೆಳೆ ಬೆಳೆಯುವ ಕೃಷಿಕರಿದ್ದಾರೆ.
ತಾಳೆಗೆ ಬೆಳೆಗೆ ಅಂತಹ ಯಾವುದೇ ಭೀತಿ ಇಲ್ಲ. ಪ್ರತಿ ಹದಿನೈದು ದಿವಸಕ್ಕೆ ಒಂದು ಭಾರಿ ಗೋದ್ರೇಜ್ ಆಗ್ರೋವೇಟ್ ಲಿಮಿಡ್ ಸಂಸ್ಥೆಯವರು ಮನೆಬಾಗಿಲಿಗೆ ಬಂದು ಖರೀದಿಸುತ್ತಾರೆ. ಇತರೆ ಕೃಷಿಗೆ ಹೋಲಿಸಿದರೆ ತಾಳೆ ಬೆಳೆಯಲು ಖರ್ಚು ತೀರಾ ಕಡಿಮೆ. ಜೊತೆಗೆ ನಿರ್ವಹಣೆ ಕೂಡ ಸುಲಭ. ಬೇಸಿಗೆಯಲ್ಲಿ ನೀರು ಹಾಕಬೇಕು, ರಾಸಾಯನಿಕ ಗೊಬ್ಬರ ಹಾಕಬೇಕು. ವಿಶೇಷ ಆರೈಕೆ ಮಾಡಬೇಕು ಎನ್ನುವ ಚಿಂತೆ ಇಲ್ಲ. ಅಡಕೆಗೆ ವರ್ಷಕ್ಕೆ 300 ಆಳು ಬೇಕಿದೆ. ಅಡಕೆ, ರಬ್ಬರ್‍ನಂತೆ ಇದಕ್ಕೆ ಕಾರ್ಮಿಕರ ಅಗತ್ಯ ಅಷ್ಟು ಇಲ್ಲ. ಉದ್ಯೋಗದಲ್ಲಿ ತೊಡಗಿರುವವರಿಗೆ, ಹೊರ ಊರಿನಲ್ಲಿ ನೆಲೆಸಿದವರಿಗೆ, ನೌಕರಿ ಮಾಡುತ್ತಲೆ ಕೃಷಿ ಬಯಸುವವರು ಹೀಗೆ ಯಾರು ಬೇಕಾದರೂ ಯಾವುದೇ ಚಿಂತೆಯಿಲ್ಲದೆ ತಾಳೆ ಬೆಳೆಯಬಹುದಾಗಿದೆ.

 

ಈ ಬಗ್ಗೆ ತಾಳೆ ಕೃಷಿ ಮಾಡಿ ಯಶಸ್ಸಿಯಾದ ತೊಡಿಕಾನ ವಸಂತ ಭಟ್ ಪ್ರತಿಕ್ರೀಯೆ ನೀಡಿ ತಾಳೆ ಕೃಷಿ ಕೃಷಿಕನ ಕೈ ಹಿಡಿಯಬಹುದು. ಪರ್ಯಾಯವಾಗಿ ಕರಾವಳಿ ಜಿಲ್ಲೆಯ ಭಾಗದಲ್ಲಿ ಇದೇ ಬೆಳಯನ್ನು ಬೆಳೆಯಬಹುದು. ಹೆಚ್ಚಿನ ಮಾಸದಲ್ಲಿ ಉತ್ತಮ ಆದಾಯ ಮೂಲವಿರುವ ಈ ಕೃಷಿಯ ಕುರಿತು ಎಲ್ಲರೂ ಮಾಹಿತಿ ಪಡೆದು ಅಳವಡಿಸಿಕೊಂಡಲ್ಲಿ ಇದೊಂದು ಕೃಷಿಕನಿಗೆ ಅತ್ಯುತ್ತಮ ಪರಿಹಾರ.

 

ಕೃಷಿಕ ಚಂದ್ರಾ ಕೋಲ್ಚಾರ್ ಪ್ರತಿಕ್ರೀಯೆ ನೀಡಿ ತಾಳೆ ಬೆಳೆಗೆ ಸರಕಾರದ ಪ್ರೋತ್ಸಾಹವಿದೆ. ಸರಕಾರ, ಸಂಸ್ಥೆ ಹಾಗೂ ರೈತ ಈ ಮೂರು ಭಾಗದ ಪ್ರತಿನಿಧಿ ಇರುವ ಸಮಿತಿ ಶೀಘ್ರ ರಚನೆ ಆಗಲಿದೆ. ಕೃಷಿಕರು ಈ ಬೆಳೆ ಕಡೆ ಆಕರ್ಷಿತರಾಗುತ್ತಿದ್ದಾರೆ. ಈ ಭಾರಿ ಫಸಲು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಫಸಲು ಹೆಚ್ಚಾದಲ್ಲಿ ಖರೀದಿ ಕೇಂದ್ರ ಸ್ಥಳಿಯ ಮಟ್ಟದಲ್ಲಿ ತೆರೆಯಲಾಗುವುದು. ತಾಳೆ ಗೊನೆಗೆ ಕೆ.ಜಿ ಒಂದಕ್ಕೆ ರೂ 9.50 ರೂ ದರ ಇದೆ. ಶೀಘ್ರ ಇದು ಹೆಚ್ಚಳವಾಗಲಿದೆ. ಸರಕಾರ ಪ್ರೋತ್ಸಾಹ ಬೆಲೆ ನೀಡುತ್ತದೆ. ಮಾರುಕಟ್ಟೆಯಲ್ಲಿ ದರ ವ್ಯತ್ಯಾಯ ಆಗುವುದಿಲ್ಲ. ಸುಳ್ಯದಲ್ಲಿ ಈ ತಿಂಗಳು 11 ರಿಂದ 12 ಟನ್‍ರಷ್ಟು ಖರೀದಿ ನಡೆದಿದೆ.

Related posts

Leave a Reply

Your email address will not be published. Required fields are marked *