

ಮೂಲ್ಕಿ : ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಒಳಪೇಟೆಯ ಮಾರುಕಟ್ಟೆ ರಸ್ತೆಯಲ್ಲಿನ ಮುದ್ದು ಸಾಲಿಯಾನ್ ಅವರ ಮಾಲೀಕತ್ವದ ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಕಳವು ಮಾಡಿದ ಘಟನೆ ಇಂದು ಪತ್ತೆಯಾಗಿದೆ. ನಿನ್ನೆ ರಾತ್ರಿ ಬಂದ್ ಮಾಡಿ ಮನೆಗೆ ತೆರಳಿದ್ದ ಮುದ್ದು ಸಾಲಿಯಾನ್ ಇಂದು ಬೆಳಿಗ್ಗೆ ಅಂಗಡಿಗೆ ಬರುವಾಗ ಕಳ್ಳತನದ ನಡೆದಿರುವ ಬಗ್ಗೆ ತಿಳಿದು, ತಕ್ಷಣ ಮೂಲ್ಕಿ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ. ಅಂಗಡಿಯ ಹೆಂಚುಗಳನ್ನು ತೆಗೆದು, ಮರದ ಮೇಲ್ಛಾವಣಿಯನ್ನು ಮುರಿದು ಒಳ ನುಗ್ಗಿರುವ ಕಳ್ಳರು ಮಾರಾಟದ ವಸ್ತುಗಳನ್ನೇಲ್ಲಾ ಚೆಲ್ಲಾಪಿಲ್ಲಿ ಮಾಡಿ ಟೇಬಲ್ನಲ್ಲಿದ್ದ ನಗದು ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.ಮೂಲ್ಕಿ ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.