Header Ads
Breaking News

ಹಳೆಯಂಗಡಿ ಗ್ರಾ.ಪಂ. ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ

ಹಳೆಯಂಗಡಿ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಕಾನೂನನ್ನು ಮೀರಿ ಆಕ್ರಮವಾಗಿ ಕಾರ್ಯವೆಸಗುತ್ತಿದೆ ಎಂದು ಆರೋಪಿಸಿ ಪಂಚಾಯತ್ ಹಳೆಯಂಗಡಿ ಗ್ರಾಮ ಪಂಚಾಯಿತಿ ವಿರುದ್ದ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.ಪ್ರತಿಬಟನೆಯನ್ನು ಉದ್ದೇಶಿ ಮಾತನಡಿದ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು ಹಳೆಯಂಗಡಿ ಗ್ರಾಮಪಂಚಾಯತ್ ಎ ಗ್ರೇಡ್ ಪಂಚಾಯಿತಿ ಆದರೂ ಯಾವುದೇ ವ್ಯವಸ್ಥೆಗಳಿಲ್ಲದೆ ಅವ್ಯವಸ್ಥೆಯ ಆಗಾರವಾಗಿದೆ. ಎಂಟು ತಿಂಗಳಿನಿಂದ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆ ನಡೆಯುತ್ತಿಲ್ಲ, ಗುತ್ತಿಗೆದಾರರ ಹಣ ಬಾಕಿ, ನೀರಿನ ಬಿಲ್ ಸಂಗ್ರಹಿಸುತ್ತಿದ್ದರೂ ಜಿಲ್ಲಾಡಳಿತಕ್ಕೆ ನೀರಿನ ಬಿಲ್ಲು ಬಾಕಿ,9-11 ಅವ್ಯವಹಾರ, ಗ್ರಾಮಸ್ಥರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು.

ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಮಾತನಾಡಿ, ಹಳೆಯಂಗಡಿ ಗ್ರಾಮ ಪಂಚಾಯಿತಿ ಬಗ್ಗೆ ಹಲವು ಬಾರಿ ಜಿಲ್ಲಾಡಳಿತಕ್ಕೆ ದೂರು ಕೊಟ್ಟರೂ ಸೂಕ್ತ ಪರಿಹಾರ ದೊರಕಿಲ್ಲ. ದಾರಿ ದೀಪ, ಸೂಕ್ತ ತ್ಯಾಜ್ಯ ವಿಲೆವಾರಿ ಮಾಡುತ್ತಿಲ್ಲ, ನೀರು ಸರಬರಾಜು ನಿರ್ವಹಣೆ ನಡೆಸುತ್ತಿಲ್ಲ, ಮನೆ ಕಟ್ಟುವ ಪರವಾನಿಗೆಗೆ ಸತಾಯಿಸಿ ತಾರತಮ್ಯ ಮಾಡುತ್ತಿರುವುದು. ಗ್ರಾಮಸ್ಥರ ಬೇಡಿಕೆಗಳಿಗೆ ಯಾವೊಂದು ನ್ಯಾಯ ಕೊಡದ ಪಂಚಾಯಿತಿಯನ್ನು ಬರ್ಕಾಸ್ತುಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಿಸಿರಿ ಎಂದರು.

ಸ್ಥಳೀಯ ಗ್ರಾಮಸ್ಥರಾದ ಎಸ್.ಎಸ್.ಸತೀಶ್ ಭಟ್, ಹಿಮಕರ್ ಕದಿಕೆ, ಸದಾಶಿವ ಚಿಲಿಂಬಿ, ಮನೋಜ್‌ಕುಮಾರ್, ಆನಂದ ಸುವರ್ಣ, ಬಿಜೆಪಿಯ ಸಂತೋಷ್ ಶೆಟ್ಟಿ, ರಾಜೇಶ್ ದಾಸ್ ಪಕ್ಷಿಕೆರೆ, ಮಧುಸೂದನ್ ಶೆಟ್ಟಿಗಾರ್ ಕಿಲ್ಪಾಡಿ, ಅನಿಲ್ ಸಸಿಹಿತ್ಲು, ಮಹಾಬಲ, ನಾಗರಾಜ್, ತಾ.ಪಂ. ಮಾಜಿ ಸದಸ್ಯೆ ಸಾವಿತ್ರಿ ಮತ್ತಿತರರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *