Header Ads
Breaking News

ಹಳೆಯಂಗಡಿ ಪಂಚಾಯತ್‌ನ್ನು ಸೂಪರ್ ಸೀಡ್ ಮಾಡಲು ಸಾಧ್ಯವಿಲ್ಲ : ಐವನ್ ಡಿಸೋಜ ಹೇಳಿಕೆ

ಹಳೆಯಂಗಡಿ ಪಂಚಾಯತ್‌ನ್ನು ಯಾವುದೇ ಕಾರಣಕ್ಕೂ ಸುಪರ್ ಸೀಡ್ ಮಾಡಲು ಸಾಧ್ಯವಿಲ್ಲ ಎಂದು ವಿಧಾನ ಪರಿಷ್ಯತ್ ಸದಸ್ಯ ಐವನ್ ಡಿಸೋಜ ಹೇಳಿದರು .

ಅವರು ಹಳೆಯಂಗಡಿ ಕಾಂಗ್ರೇಸ್ ಬ್ಲಾಕ್ ಅಫೀಸ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿ ಮಾತನಾಡಿ ಸುಪರ್ ಸೀಡ್ ಮಾಡಲು ಕಾನೂನು ಇದ್ದರೂ ಕಾನೂನನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ, ಪಂಚಾಯತ್ ನಲ್ಲಿ ಕಳೆದ ೮ ತಿಂಗಳಿನಿಂದ ಪಿ.ಡಿ.ಒ ಇಲ್ಲದ ಕಾರಣ ಸಭೆ ನಡೆಸಲು ಸಾಧ್ಯವಾಗಿಲ್ಲ. ಪಿ.ಡಿ.ಒ ಇಲ್ಲದೆ ಸಭೆ ನಡೆಸಬಾರದು ಎಂದು ಕಾನೂನು ಹೇಳುತ್ತದೆ, ಆದರೆ ದಿನನಿತ್ಯದ ಯಾವುದೇ ಕೆಲಸ ಕಾರ್ಯಗಳಿಗೆ ತೊಂದರೆ ಆಗಿಲ್ಲ, ಮುಂದೆ ಚುನಾವಣೆ ಇದೆ ಎಂದು ಬಿಜೆಪಿಯವರು ಪ್ರತಿಭಟನೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ, ಬಿಜೆಪಿಯವರು ರಾಜಕೀಯ ಮಾಡಿದರೆ ನಾವು ರಾಜಕೀಯ ಮಡುತ್ತೇವೆ, ಪಂಚಾಯತ್ ರಾಜಕೀಯ ರಹಿತ ಸಂಸ್ಥೆ, ಸುಪರ್ ಸೀಡ್ ಬಗ್ಗೆ ಒಬ್ಬ ಅಧಿಕಾರಿ ಪತ್ರ ಕೊಡುತ್ತಾನೆ ಎಂದರೆ ಅವನಿಗೆ ಅಹಂಕಾರವಿರಬಹುದು, ಅಂತಹ ಅಧಿಕಾರಿಗಳನ್ನು ಅಮಾನತು ಮಾಡುತ್ತೇನೆ, ಈ ಬಗ್ಗೆ ವಿಧಾನ ಸಭೆಯಲ್ಲಿಯೂ ಮಾತನಾಡುತ್ತೇನೆ ಎಂದರು. ಜಮ್ಮು ಕಾಶ್ಮೀರದಲ್ಲಿನ ೩೭೦ ವಿಧಿಯನ್ನು ರದ್ದುಗೋಳಿಸಿದ್ದಕ್ಕೆ ನನ್ನ ತಕರಾರಿಲ್ಲ, ಜಮ್ಮು ಕಾಶ್ಮೀರ ಬಾರತ ಅಥವಾ ಪಾಕಿಸ್ಥಾನಕ್ಕೆ ಸೇರಬೇಕಾದದ್ದೋ ಎಂಬ ಪ್ರಶ್ನೆ ಬಂದಾಗ ಅವರ ರಕ್ಷಣೆಗೋಸ್ಕರ, ಒಂದು ಒಡಂಬಡಿಕೆ ಮೂಲಕ ಅವರಿಗೆ ಈ ಕಾನೂನನ್ನು ನೀಡಲಾಗಿತ್ತು ಎಂದರು. ಈ ಸಂದರ್ಭ ಕೆಪಿಸಿಸಿ ಸದಸ್ಯ ಎಚ್. ವಸಂತ ಬೆರ್ನಾಡ್, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೋ, ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಧನಂಜಯ ಮಟ್ಟು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *