Header Ads
Header Ads
Breaking News

ಹಳೆಯ ನೋಟು ಎಣಿಸಲು ಹೊಸ ಯಂತ್ರ, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ

ರೂ. ೫೦೦ ಮತ್ತು ರೂ. ೧,೦೦೦ ಮುಖಬೆಲೆಯ ನೋಟುಗಳೂ ಸೇರಿದಂತೆ ನೋಟು ರದ್ದತಿ ಬಳಿಕ ಬ್ಯಾಂಕ್ಗಳಲ್ಲಿ ಠೇವಣಿ ಮಾಡಿದ ನೋಟುಗಳ ದೃಢೀಕರಣ ಮತ್ತು ಎಣಿಕೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ೫೦ ಹೊಸ ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ.
ಈ ಯಂತ್ರಗಳ ಖರೀದಿಗೆ ಜಾಗತಿಕ ಟೆಂಡರ್ ಕರೆದಿದ್ದು, ೧೮ ಪ್ರಾದೇಶಿಕ ಕಚೇರಿಗಳಲ್ಲಿ ಬಳಕೆ ಮಾಡಲು ಆರ್ಬಿ‌ಐ ಮುಂದಾಗಿದೆ. ಈ ಯಂತ್ರಗಳು ಕಂಪ್ಯೂಟರ್ಗೆ ಸಂಪರ್ಕ ಹೊಂದಿದ್ದು, ಮೈಕ್ರೊ ಪ್ರೊಸೆಸರ್ ಮೂಲಕ ನಿಯಂತ್ರಣಕ್ಕೆ ಒಳಪಟ್ಟಿರಲಿವೆ.
ನೋಟುಗಳನ್ನು ಪರಿಶೀಲನೆ ನಡೆಸುವ, ಲೆಕ್ಕ ಹಾಕುವ, ಪ್ರತ್ಯೇಕಿಸುವ ಮತ್ತು ದೃಢೀಕರಿಸುವ, ಚಲಾವಣೆಗೆ ಯೋಗ್ಯ ಮತ್ತು ಯೋಗ್ಯವಲ್ಲದ, ನಕಲಿ ಹೀಗೆ ಹಲವು ಬಗೆಗಳಲ್ಲಿ ನೋಟುಗಳನ್ನು ವಿಂಗಡಿಸುವ ಕೆಲಸವನ್ನು ಈ ಯಂತ್ರಗಳು ಮಾಡಲಿವೆ. ಈ ಯಂತ್ರಗಳು ಒಂದು ಸೆಕೆಂಡ್ಗೆ ಕನಿಷ್ಠ ೩೦ ನೋಟುಗಳ ಪರಿಶೀಲನೆ ಮತ್ತು ಲೆಕ್ಕ ಮಾಡಲಿವೆ ಎಂದು ಆರ್ಬಿ‌ಐನ ಮೂಲಗಳು ಮಾಹಿತಿ ನೀಡಿವೆ.

Related posts

Leave a Reply