Header Ads
Header Ads
Breaking News

ಹಳೆಯ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಮಂಗಳೂರಿನ ಪುರಭವನದಲ್ಲಿ ಸತ್ಯಾಗ್ರಹ

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಬೆಂಗಳೂರು, ತಾಲೂಕು ಘಟಕ ಮಂಗಳೂರು ವತಿಯಿಂದ ರಕ್ತಕೊಟೇವು, ಪಿಂಚಣಿ ಬಿಡೆವು. ಹಳೆಯ ಪಿಂಚಣಿ ಪದ್ಧತಿಗೆ ಆಗ್ರಹಿಸಿ ರಕ್ತದಾನ ಶಿಬಿರ ಮತ್ತು ಸತ್ಯಾಗ್ರಹವು ಮಂಗಳೂರಿನ ಪುರಭವನದಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸತ್ಯಾಗ್ರಹ ನಡೆಯುತ್ತಿದ್ದು, ಮಂಗಳೂರಿನ ಪುರಭವನದಲ್ಲೂ ವಿನೂತನ ರೀತಿಯಲ್ಲಿ ಸತ್ಯಾಗ್ರಹ ನಡೆಯಿತು.

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘವು ಕಳೆದ ನಾಲ್ಕು ವರ್ಷಗಳಿಂದ ಯೋಜನೆಯ ಕರಾಳತೆಯ ಕುರಿತು ನೌಕರರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಈ ಯೋಜನೆಯನ್ನು ವಿರೋಧಿಸಿ ಪತ್ರ ಚಳುವಳಿ, ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಗಿದೆ. ಆದರೂ ಈ ವರಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ವಿನೂತನ ರೀತಿಯಲ್ಲಿ ಸತ್ಯಾಗ್ರ ನಡೆಸಿದರು.

Related posts

Leave a Reply