Header Ads
Header Ads
Breaking News

ಹಳೇಯ ಬಟ್ಟೆಗಳಿಗೆ ಮರುಜೀವ

ಉಡುಪಿ: ಉಡುಪಿ ಜಿಲ್ಲಾ ನಾಗರೀಕ ಸಮಿತಿಯಿಂದ ಹಳೆ ಬಟ್ಟೆಗಳಿಗೆ ಮರು ಜೀವ ನೀಡುವ ಮೂರನೇ ಹಂತದ ಕಾರ್ಯಕ್ರಮವು ಬೀಡಿನಗುಡ್ಡೆ ವಲಸೆ ಕಾರ್ಮಿಕರ ಎರಡು ಬಡಾವಣೆಗಳಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ರಾಜು ಪೂಜಾರಿ ಬೀಡಿನಗುಡ್ಡೆ ಬಟ್ಟೆಗಳನ್ನು ವಿತರಿಸಿದರು.

ನೂರಾರು ಕಾರ್ಮಿಕರು ತಮಗೆ ಬೇಕಾದ ಬಟ್ಟೆಗಳನ್ನು ಆಯ್ದುಕೊಂಡರು. ಬಟ್ಟೆ ಅಂಗಡಿಗಳಲ್ಲಿ ಹಳೆ ದಾಸ್ತಾನುಗಳಾಗಿ ಉಳಿದ ಬಟ್ಟೆಗಳನ್ನು ಅಂಗಡಿ ಮಾಲಿಕರು ಸಮಿತಿಯವರ ಯೋಜನೆಗೆ ದಾನವಾಗಿ ನೀಡಿದ್ದರು. ಹಳೆ ಬಟ್ಟೆಗಳನ್ನು ಹೊಳೆಗಳಿಗೆ ಎಸೆಯ ಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಸುಡಬೇಡಿ, ನಿಮ್ಮಲ್ಲಿರು ಉತ್ತಮ ಗುಣಮಟ್ಟದ ಬಟ್ಟೆಗಳನ್ನು ನಮಗೆ ನೀಡಿ, ಅದನ್ನು ನಾವು ಅವಶ್ಯಕತೆ ಇದ್ದವರಿಗೆ ವಿತರಿಸುವ ಕಾರ್ಯವನ್ನು ಮಾಡುತ್ತೆವೆಂದು ನಾಗರಿಗ ಸಮಿತಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ನೀಡಿದ್ದರು.
ಪ್ರಕಟಣೆಗೆ ಸ್ಪಂದಿಸಿದ ನಗರದ ನಿವಾಸಿಗಳು ಬಟ್ಟೆಗಳ ಶುಚಿಗೊಳಿಸಿ ಇಸ್ತ್ರಿ ಹಾಕಿ ಅಚ್ಚುಕಟ್ಟಾಗಿ ಸಮಿತಿಯ ಕಛೇರಿಗೆ ತಂದು ಒಪ್ಪಿಸಿದ್ದಾರೆ. ಹೀಗೆ ಸಾರ್ವಜನಿಕರಿಂದ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಸಂಗ್ರಹಗೊಂಡು ದಾಸ್ತನಾದ ಬಳಿಕ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ರಾಜು ಪೂಜಾರಿ ಅವರು ನಗರದ ಹೊರ ವಲಯದಲ್ಲಿರುವ ವಲಸೆ ಕಾರ್ಮಿಕರ ಬಡಾವಣೆ, ಕೊರಗರ ಬಡಾವಣೆಗಳಲ್ಲಿ ಪುರುಷರ, ಮಹಿಳೆಯರ, ಮಕ್ಕಳ ಬಟ್ಟೆಗಳನ್ನು ವಿತರಿಸುತ್ತ ಬಂದಿದ್ದಾರೆ. ಹಳೆ ಬಟ್ಟೆಗಳಿಗೆ ಮರುಜೀವ ನೀಡುವ ಸಮಿತಿಯ ಯೋಜನೆ ಮೆಚ್ಚುಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Related posts

Leave a Reply