Header Ads
Header Ads
Breaking News

ಹಳ್ಳಿಮನೆ ರೊಟ್ಟಿಯ ಶಿಲ್ಪಾಗೆ ಮಹೀಂದ್ರಾ ಬೊಲೆರೋ ಕೊಡುಗೆ ಕರ್ನಾಟಕ ಏಜೆನ್ಸೀಸ್‌ನಲ್ಲಿ ಬೊಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ಹಸ್ತಾಂತರ ಕೊಟ್ಟಾರ ಚೌಕಿಯಲ್ಲಿರುವ ಮಹೀಂದ್ರಾ ವಾಹನಗಳ ಅಧಿಕೃತ ಮಾರಾಟದಲ್ಲಿ ಸಮಾರಂಭ

 

ಮಲೆನಾಡು ಶೈಲಿಯ ರೊಟ್ಟಿಗಳನ್ನು ಮೊಬೈಲ್ ಕ್ಯಾಂಟೀನ್ ನಲ್ಲಿ ಮಾರಾಟ ಮಾಡಿ ಬದುಕಿನಲ್ಲಿ ಯಶಸ್ಸು ಸಾಧಿಸಿದ ದಿಟ್ಟ ಮಹಿಳೆ ಮಂಗಳೂರಿನ ಶಿಲ್ಪಾ ಅವರಿಗೆ ಮಹೀಂದ್ರಾ ಕಂಪನಿ ಕೊಡುಗೆಯಾಗಿ ನೀಡಿದ ಹೊಸ ಮಹೀಂದ್ರಾ ಪಿಕ್ ಆಪ್ ವಾಹನವನ್ನು ಹಸ್ತಾಂತರಿಸಲಾಯಿತು.

ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿರುವ ಮಹೀಂದ್ರಾ ವಾಹನಗಳ ಅಧಿಕೃತ ಮಾರಾಟಗಾರರಾದ ಕರ್ನಾಟಕ ಏಜನ್ಸೀಸ್ ನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಸಿಇಒ ಆರ್.ಸಿ.ರಾಡಿಗ್ರಸ್ ವಾಹನದ ಕೀಲಿ ಕೈ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೂ ಪರಿಶ್ರಮದಲ್ಲಿ ನಂಬಿಕೆ ಇರಿಸಿದ ಶಿಲ್ಪಾ ಸಮಾಜ ಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.ಮಾಧ್ಯಮದವರು ನನ್ನ ಶ್ರಮದ ವಿಚಾರ ಪ್ರಕಟಿಸಿ ಪ್ರಚಾರ ನೀಡಿದ್ದಾರೆ. ಇದನ್ನು ಕಂಡು ಮಹೀಂದ್ರಾ ಕಂಪನಿಯವರು ಹೊಸ ವಾಹನ ನೀಡಿದ್ದಾರೆ. ನನಗೆ ಅತೀವ ಸಂತಸವಾಗಿದೆ
ವ್ಯಾಪರ ವಿಸ್ತರಣೆ ಅವರು ವಾಹನ ನೀಡಿರುವ ಕಾರಣ ನಗರದಲ್ಲಿ ಇನ್ನೊಂದು ಮೊಬೈಲ್ ಕ್ಯಾಂಟೀನ್ ತೆರೆಯುತ್ತೇನೆ ಎಂದು ಈ ಸಂದರ್ಭ ಶಿಲ್ಪಾ ಹೇಳಿದರು.

ಈ ವೇಳೆ ಕರ್ನಾಟಕ ಎಜೆನ್ಸೀಸ್ ನ ಪಾಲುದಾರ ಸಂತೋಷ್ ರಾಡಿಗ್ರಸ್, ಕಮರ್ಶಿಯಲ್ ಸೇಲ್ಸ್ ಮುಖ್ಯಸ್ಥ ಫಾರ್ಚುನೆಟ್ ಸೆರಾವೋ, ಶಿಲ್ಪಾ ಪಾಲಕರಾದ ಚಂದ್ರಶೇಖರ್, ನಾಗರತ್ನ, ಸಹೋದರ ಚಿರಂಜೀವಿ ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply