Header Ads
Header Ads
Breaking News

ಹಳ್ಳಿಯ ನದಿ ತೊರೆಗಳಲ್ಲಿ ಏಡಿ ಬೇಟೆ, ರಾತ್ರಿ ಹೊತ್ತಿನಲ್ಲಿ ಏಡಿ ಹಿಡಿಯುವ ದ. ಕ. ಯುವಕರು


ಅದೆಷ್ಟೋ ಸಮಯಗಳಿಂದ ಹಳ್ಳಿಯಿಂದ ಹೋಗಿ ಪೇಟೆಯಲ್ಲಿ ನೆಲಿಸಿರುವ ಯುವಕರು ಮಳೆ ಪ್ರಾರಂಭವಾದರೆ ಸಾಕು ಯುವಕರು ಮತ್ತೆ ಹಳ್ಳಿಗೆ ಬಂದು ತಮ್ಮ ಸ್ನೇಹಿತರ ಜೊತೆ ಜಾಲಿ ರೈಡ್ ಮಾಡುತ್ತಾ ಸಕತ್ತಾಗಿ ಮಜಾ ಮಾಡುತ್ತಾರೆ. ಅವರು ಮಾಡುವ ರೈಡ್ ಸಾಮಾನ್ಯದ್ದಲ್ಲ.
ಸಿಟಿಯಲ್ಲಿ ನೆಲೆಸಿರುವ ಹಳ್ಳಿಗಾಡಿನ ಯುವಕರು ಮಳೆ ಬಂದಾಗ ತಮ್ಮ ಹಳ್ಳಿಗೆ ಬಂದು ನದಿ ತೊರೆಗಳಲ್ಲಿ ರೈಡ್ ಮಾಡಿ ಅಪಾಯಕಾರಿ ಏಡಿ ಹಿಡಿದು ತಾವೇ ಅಡುಗೆ ಮಾಡಿ ಊಟ ಮಾಡಿ ಜಾಲಿ ಮಾಡುತ್ತಾರೆ. ರಾತ್ರಿ ವೇಳೆ ಲೈಟ್, ಕತ್ತಿಗಳನ್ನು ಹಿಡಿದುಕೊಂಡು ನೀರಿನಲ್ಲಿ ಏಡಿಗಳನ್ನು ಹುಡುಕಿಕೊಂಡು ಹೋಗುತ್ತಾರೆ. ತೊರೆಗಳಲ್ಲಿ ಅತ್ತಿತ್ತ ಓಡಾಡುವ ಏಡಿಗಳನ್ನು ಕೈಯಿಂದ ಹಾಗೂ ಕತ್ತಿಯಿಂದ ಹಿಡಿಯುತ್ತಾರೆ. ಇವುಗಳಿಗೆ ಬಲೆ ಹಾಕಿ ಹಿಡಿಯುವುದು ಅಸಾಧ್ಯ. ಇವುಗಳನ್ನು ಹಿಡಿಬೇಕು ಅಂದ್ರೆ ಈ ರೀತಿ ವಿವಿಧ ರೀತಿಯ ಕತ್ತಿಗಳೇ ಬೇಕು. ಇವುಗಳನ್ನು ಸಿದ್ಧವಾಗಿಟ್ಟುಕೊಳ್ಳುವ ಹಳ್ಳಿಯ ಜನ, ಮಳೆ ಆರಂಭದ ದಿನಗಳಲ್ಲಿ ಈ ರೀತಿ ರಾತ್ರಿಯ ವೇಳೆಯಲ್ಲಿ ಏಡಿಗಳನ್ನು ಬೇಟೆಯಾಡ್ತಾರೆ. ಏಡಿಗಳನ್ನು ಕೈಯಲ್ಲಿ ಹಿಡಿಯಬಹುದಾದ್ರೂ ಅವುಗಳ ಮೊನಚಾದ ಹಲ್ಲುಗಳ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲವಾದರೆ ಅವುಗಳು ಬೆರಳನ್ನೇ ತುಂಡರಿಸುವ ಸಾಧ್ಯತೆ ಇದೆ.
ತಮ್ಮ ಸ್ನೇಹಿತರ ಜತೆ ಹೀಗೆ ಚಿಕ್ಕಪುಟ್ಟ ಹಳ್ಳಗಳಲ್ಲಿ ಸಿಗೋ ಏಡಿ ಹಿಡಿಯುವ ಕೆಲಸ ಒಂದು ಮೋಜಿ ವಿಷಯವಾಗಿದೆ. ಮಂಗಳೂರಿನಲ್ಲಿ ಮೀನಿಗೆ ದುಪ್ಪಟ್ಟು ವೆಚ್ಚವಿದೆ. ಇದರಿಂದಾಗಿ ನಾವು ನಮ್ಮ ಊರಿನ ಸುತ್ತಮುತ್ತಲಿನಲ್ಲಿ ಮೀನುಗಳನ್ನು ಹಿಡಿದು ತಿನ್ನುತ್ತೇವೆ ಎನ್ನುತ್ತಾರೆ ಸ್ಥಳೀಯ ಏಡಿ ಬೇಟೆಗಾರ ಗಣೇಶ್. ಏಡಿಗಳು ನೀರಿನ ಅಡಿಯಲ್ಲಿ ಕಾಣಲು ಸಿಗೋದಿಲ್ಲ ಮಾತ್ರವಲ್ಲದೇ ನೀರು ಹೆಚ್ಚಾದ್ರೂ ಇವುಗಳು ಕೈಗೆ ಸಿಗುವುದಿಲ್ಲ. ಹೀಗಾಗಿ ಕಡಿಮೆ ನೀರು ಇರುವ ಸಮಯದಲ್ಲಿ ಅವುಗಳನ್ನು ಈ ರೀತಿಯಾಗಿ ಹಿಡಿಯಬಹುದು. ಇದರಿಂದಲೇ ಏಡಿಗಳನ್ನು ಬೇಟೆಯಾಡುವುದು ಹುಡುಗರಿಗೆ ಸಂತಸದ ವಿಷಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನು, ಏಡಿಗಳಿಗೆ ಏನೂ ಕಡಿಮೆ ಇಲ್ಲ. ಆದ್ರೆ ಮಳೆಗಾಲ ಆರಂಭವಾಗುತ್ತಾ ಇದ್ದಂತೆ ದಡ ಸೇರೋ ಮೀನುಗಾರಿಕಾ ಬೋಟುಗಳು ಮತ್ತೆ ಮಳೆ ಕಡಿಮೆ ಆಗೋವರೆಗೂ ಸಮುದ್ರಕ್ಕೆ ಇಳಿಯೋದಿಲ್ಲ. ಹೀಗಾಗಿ ತಾಜಾ ಮೀನುಗಳು ಸಿಗೋದು ಕೂಡಾ ಕಡಿಮೆಯಾಗಿದೆ. ಆದ್ರೆ ಮಳೆಗಾಲ ಆರಂಭವಾಗ್ತಾ ಇದ್ದಂತೆ ನದಿ ಸೇರೋ ಭರದಲ್ಲಿ ಹರಿಯುವ ಹಳ್ಳ ಕೊಳ್ಳಗಳಲ್ಲಿ ಯಥೇಚ್ಚವಾಗಿ ಮೀನುಗಳು ಮತ್ತು ಏಡಿಗಳು ದೊರೆಯುತ್ತದೆ. ಮಳೆಗಾಲ ಪ್ರಾರಂಭಗೊಳ್ಳುತ್ತಿದ್ದಂತೆ ತುಳುನಾಡಿನಲ್ಲಿ ತೊರೆಗಳಲ್ಲಿ ಕಲ್ಲು ಡೆಂಜಿ ಸಿಗುತ್ತದೆ. ಸಿಹಿ ನೀರಿನಲ್ಲಿ ಸಿಗುವ ಇದು ಉತ್ತಮವಾಗಿದೆ. ಸಮುದ್ರದಲ್ಲಿ ಸಿಗುವ ಏಡಿ ಇಷ್ಟೊಂದು ರುಚಿಯಾಗಿ ಇರುವುದಿಲ್ಲ. ಇದು ಗ್ರಾಮೀಣ ಭಾಗದಲ್ಲಿ ಮಾತ್ರ ಸಿಗುತ್ತದೆ ಪೇಟೆಯಲ್ಲಿ ಸಿಗುವ ಏಡಿಗಿಂತ ಹಳ್ಳಿಗಾಡಿನ ನದಿಗಳಲ್ಲಿ ಸಿಗುವ ರುಚಿ ಇನ್ನೂ ಉತ್ತಮವಾಗಿರುತ್ತದೆ ಎನ್ನುತ್ತಾರೆ ಛಾಯಗ್ರಾಹಕ ದಯಾ ಕುಕ್ಕಾಜೆ.
ಜನರು ಮೀನು ಪ್ರಿಯರು ಆಗಿದ್ದರಿಂದ ಮೀನು ಇಲ್ಲದೇ ಊಟ ಸೇರೋದೇ ಇಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಮೀನು ಸಿಕ್ಕಿಲ್ಲ ಅಂದ್ರೂ ಈ ರೀತಿಯಾಗಿ ತಾವೇ ಮೀನು ಹಿಡಿದು ತಿಂತಾರೆ. ಅದರಲ್ಲಿಯೂ ಹಳ್ಳಿಯಿಂದ ಬಂದು ಪೇಟೆ ನೆಲೆಸಿರೋ ಯುವಕರಿಗೆ ಇದೊದು ಸಕತ್ ಮಜಾ ನೀಡೋ ವಿಚಾರವಾಗಿದೆ.

Related posts

Leave a Reply