Header Ads
Header Ads
Header Ads
Breaking News

ಹಸಿರು ಭಾರತವನ್ನಾಗಿಸಲು ಪಣ : ಬಿಹಾರದಿಂದ ಸೈಕಲ್‍ನಲ್ಲಿ ಬಂದ ವಿದ್ಯಾರ್ಥಿಗಳು

ಮಂಜೇಶ್ವರ: ಹಸಿರು ಭಾರತವನ್ನಾಗಿಸಬೇಕೆಂಬ ಸಂದೇಶದೊಂದಿಗೆ ಗಾಂಧೀಜಿಯ ತತ್ವವನ್ನು ಅಳವಡಿಸಿಕೊಂಡು ಎಲ್ಲಾ ಭಾರತೀಯರು ಸಹೋದರತ್ವದಿಂದ ಬಾಳಬೇಕು, ನಮ್ಮ ನಾಡು ಶಾಂತಿಯ ಯ ಬೀಡಾಗಬೇಕು, ಗಲಭೆಗಳಿಲ್ಲದೆ ನಮ್ಮ ಭಾರತ ವಿಶ್ವದಲ್ಲಿ ಉನ್ನತ ಸ್ಥಾನಕ್ಕೆ ತಲುಪಬೇಕು ಮೊದಲಾದ ಸಂದೇಶಗಳೊಂದಿಗೆ ಅಕ್ಟೊಬರ್ 17 ಕ್ಕೆ ಬಿಹಾರದಿಂದ ಸೈಕಲಿನಿಂದ ಹದಿನಾಲ್ಕು ರಾಜ್ಯಗಳಿಗೆ ಭೇಟಿ ನೀಡುವ ಉದ್ದೇಶದಿಂದ ಸೈಕಲಿನಲ್ಲಿ ಬಿಹಾರದಿಂದ ಯಾತ್ರೆಯನ್ನು ಆರಂಭಿಸಿದ ಇಬ್ಬರು ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಮಂಜೇಶ್ವರಕ್ಕೆ ತಲುಪಿದ್ದಾರೆ.

ಪದವಿ ವಿದ್ಯಾರ್ಥಿನಿಗಳಾಗಿರುವ ಆಸ್ಫಾ ಕಾಟೂನ್ ಹಾಗೂ ಅಂಕಿತಾ ರಾಜ್ ರವರಿಗೆ ಮಂಜೇಶ್ವರ ಪೊಲೀಸರು ಉಳಿದುಕೊಳ್ಳಲು ಬೇಕಾದ ಸೌಕರ್ಯವನ್ನು ಮಾಡಿಕೊಟ್ಟು ಅವರ ಸಂದೇಶವನ್ನು ಸ್ವಾಗತಿಸಿಕೊಂಡಿದ್ದಾರೆ. ಈಗಾಗಲೇ ಏಳು ರಾಜ್ಯಗಳಲ್ಲಿ ಸೈಕಲಿನಲ್ಲೇ ಯಾತ್ರೆಯನ್ನು ಮುಗಿಸಿಕೊಂಡಿರುವ ಈ ಇಬ್ಬರು ವಿದ್ಯಾರ್ಥಿನಿಗಳು ಇನ್ನು ಏಳು ರಾಜ್ಯಗಳಿಗೆ ತೆರಳಿ ತಮ್ಮ ಸಂದೇಶವನ್ನು ರವಾನಿಸುವುದಾಗಿ ತಿಳಿಸಿದ್ದಾರೆ.

ಬಿಹಾರ, ಜಾರ್ಖಂಡ್ , ಒರಿಸ್ಸಾ, ಅಆಂಧ್ರ ಪ್ರದೇಶ , ತೆಲಂಗಾಣ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ಸೇರಿದಂತೆ ಹದಿನಾಲ್ಕು ರಾಜ್ಯಗಳಳ್ಳಿ ಸೈಕಲ್ ಮೂಲಕ ಯಾತ್ರೆಯನ್ನು ನಡೆಸಿ ಛತ್ತೀಸ್ ಘಡ್‍ನಲ್ಲಿ ಕೊನೆಗೊಳಿಸಲಿರುವುದಾಗಿ ವಿದ್ಯಾರ್ಥಿನಿಗಳು ತಿಳಿಸಿದ್ದಾರೆ. ಕೇರಳದ ಜನತೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಈ ಸೈಕಲ್ ಸವಾರಿಗಳು ದೇವರ ನಾಡಾಗಿರುವ ಕೇರಳದ ಭಾಷೆ ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿರುವುದಾಗಿ ತಿಳಿಸಿದರು.

Related posts

Leave a Reply

Your email address will not be published. Required fields are marked *