Header Ads
Breaking News

ಹಸಿರು ವಲಯದ ಪಟ್ಟಿಯಲ್ಲಿ ಉಡುಪಿ ಜಿಲ್ಲೆ : ಅಂಗಡಿಗಳಲ್ಲಿ ಮುಗಿಬಿದ್ದ ಗ್ರಾಹಕರು

ಕಾರ್ಕಳ. ಉಡುಪಿ ಜಿಲ್ಲೆ ಹಸಿರು ವಲಯಕ್ಕೆ ಸೇರಿದ ನಂತರ ಇಂದು ಕಾರ್ಕಳದಲ್ಲಿ ಬೆಳಿಗ್ಗಿನಿಂದಲೇ ವಾಹನದಟ್ಟಣೆ ತೀವ್ರವಾಗಿದ್ದು, ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ತುಂಬಾ ಕಷ್ಟವಾಗುತ್ತಿತ್ತು. ಪೊಲೀಸರಿಗೆ ವಾಹನ ಸಂಚಾರವನ್ನು ನಿಯಂತ್ರಿಸುವುದೇ ಸವಾಲಾಗಿ ಕಂಡುಬಂತು. ಇಂದು ಕಾರ್ಕಳದ ಸಂತೆಯ ದಿನವಾಗಿದ್ದರಿಂದ ಕಾರ್ಕಳ ಪೇಟೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು. ರಂಜಾನ್ ಉಪವಾಸಕ್ಕೆ ಬೇಕಾಗುವ ಹಣ್ಣು ಹಂಪಲು ದವಸಧಾನ್ಯಗಳನ್ನು ಕೊಳ್ಳಲು ಗ್ರಾಹಕರು ಪೇಟೆಯಲ್ಲಿ ಮುಗಿಬಿದ್ದಿದ್ದು ಕಂಡುಬಂತು. ಯಾರು ಕೂಡ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಲ್ಲಿ ಯಾರು ಆಸಕ್ತಿವಹಿಸಿ ಕೊಳ್ಳದಿರುವುದು ಕಂಡುಬಂತು.

Related posts

Leave a Reply

Your email address will not be published. Required fields are marked *