Header Ads
Breaking News

“ಹಾಗ್ – 2ಕೆ20” – ಆಹಾರೋತ್ಸವ

ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ ಮತ್ತು ಟೂರಿಸಮ್ ಮತ್ತು ಶ್ರೀನಿವಾಸ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ ಪಾಂಡೇಶ್ವರ, ಇದರ ಸಹಯೋಗದೊಂದಿಗೆ ಮಂಗಳೂರಿನಲ್ಲಿ “ಹಾಗ್ – 2ಕೆ20” ವಾರ್ಷಿಕ ಆಹಾರೋತ್ಸವವನ್ನು ದಿನಾಂಕ 14.03.2019 ರಂದು ಆಚರಿಸಲಾಗುವುದು.

1993 ರಿಂದ ಪ್ರತೀ ವರ್ಷವು ಆಚರಿಸುತ್ತಾ ಬಂದಿರುವ ಆಹಾರೋತ್ಸವವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಈ ಆಹಾರೋತ್ಸವದಂದು ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರ ಪದಾರ್ಥ ಹಾಗೂ ಸಿಹಿತಿಂಡಿಗಳನ್ನು ತಯಾರಿಸಲಿದ್ದಾರೆ. ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರೀ.ಸಿಎ ಎ. ರಾಘವೇಂದ್ರ ರಾವ್, ಗೌರವಾನ್ವಿತ ಕುಲಪತಿಗಳು ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಅಧ್ಯಕ್ಷರು, ಎ. ಶಾಮರಾವ್ ಫೌಂಡೇಶನ್, ಮಂಗಳೂರು ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಡುಪಿಯ ಲಿಗಾಡೋ ಹೋಟೆಲ್ ಕಾರ್ಯನಿರ್ವಹಣಾ ನಿರ್ದೇಶಕ ಬಿಜು ವರ್ಗೀಸ್ ಭಾಗವಹಿಸಲಿರುವರು.

ಶ್ರೀನಿವಾಸ ವಿಶ್ವವಿದ್ಯಾಲಯ ಸಹ ಕುಲಪತಿ ಮತ್ತು ಎ. ಶಾಮರಾವ್ ಫೌಂಡೇಶನ್‍ನ ಉಪಾಧ್ಯಕ್ಷ ಡಾ.ಶ್ರೀನಿವಾಸ ರಾವ್, ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜಸ್‍ನ ನಿರ್ದೇಶಕಿ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಎ. ಶಾಮರಾವ್ ಫೌಂಡೇಶನ್‍ನ ಕಾರ್ಯದರ್ಶಿ ಶ್ರೀಮತಿ ಎ. ಮಿತ್ರ ಎಸ್. ರಾವ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Related posts

Leave a Reply

Your email address will not be published. Required fields are marked *