Header Ads
Breaking News

ಹಾಜಿ ಅಬ್ಧುಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ರೋಟಾ ವೈರಸ್ ಲಸಿಕೆ ಕಾರ್ಯಕ್ರಮ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಒಂದುವರೆ ವರ್ಷ ಒಳಗಿನ ಮಕ್ಕಳಿಗೆ ರೋಟಾ ವೈರಸ್ ಲಸಿಕೆ ಹಾಕುವ ಕಾರ್ಯಕ್ರಮ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಭ್ದುಲ್ಲಾ ಆಸ್ಪತ್ರೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಹಾಗೂ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಜಿಲ್ಲಾಪಂಚಾಯತ್ ಅದ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು. ಅನೇಕ ಸಮಾಜಸೇವಾ ಸಂಸ್ಥೆಗಳ ಸಹಯೋಗದಿಂದ ಈಗಾಗಲೇ ಪಲ್ಸ್ ಪೋಲೀಯೋವನ್ನು ಸಮಾಜದಿಂದ ಹಿಮ್ಮೆಟ್ಟಿಸಲು ಸಾದ್ಯವಾಗಿದೆ. ಇಂತಹ ಸಮಾಜಸೇವಾ ಸಂಸ್ಥೆಗಳ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಮಾತನಾಡಿ 9 ಮಾರಕ ರೋಗಗಳ ವಿರುದ್ದ ಈಗಾಗಲೇ ಚುಚ್ಚುಮದ್ದು ನೀಡುವ ಕಾರ್ಯಕ್ರಮ ದೇಶದಾದ್ಯಂತ ಆರಂಭವಾಗಿದೆ. ಇದರಲ್ಲಿ ರೋಟಾ ವೈರಸ್ ಕೂಡಾ ಒಂದು. ಅತಿ ಸಾರ ಬೇದಿಯಿಂದ ದೇಶದ 40 ಶೇಕಡಾ ಮಕ್ಕಳು ಬಳಲುತ್ತಿದ್ದಾರೆ. ದೇಶದಾದ್ಯಂತ ವಾರ್ಷಿಕವಾಗಿ 78 ಸಾವಿರ ಮಕ್ಕಳು ಈ ರೋಟಾ ವೈರಸ್ ನಿಂದ ಸಾವಿಗೀಡಾಗುತ್ತಿದ್ದಾರೆ. ಎಂದು ಮಾಹಿತಿ ನಿಡಿದರು.

Related posts

Leave a Reply

Your email address will not be published. Required fields are marked *