Header Ads
Header Ads
Breaking News

ಹಾಡು ನಿಲ್ಲಿಸಿದ ಕುಂದಾಪುರದ ಟ್ರೋಲ್ ಕಿಂಗ್ ವೈಕುಂಠ

ಕುಂದಾಪುರದ ರಾಕ್ ಸ್ಟಾರ್ ಎಂದೇ ಖ್ಯಾತಿ ಪಡೆದ ವೈಕುಂಠ ಅವರು ತೀವ್ರ ಅಸ್ವಸ್ಥಗೊಂಡು ನಿನ್ನೆ ತಡರಾತ್ರಿ ವಿಧಿವಶರಾಗಿದ್ದಾರೆ. ತನ್ನ ವಿಭಿನ್ನ ಶೈಲಿಯ ಹಾಡುಗಾರಿಕೆಯ ಮೂಲಕ ಕುಂದಾಪುರದ ಜನರನ್ನ ರಂಜಿಸ್ತಾ ಇದ್ರು. ಇವರ ಅಗಲುವಿಕೆಗೆ ಕುಂದಾಪುರದ ಜನತೆ ಕಂಬನಿ ಮಿಡಿದಿದ್ದಾರೆ.
ಯಾವುದೇ ಸಾಮಾನ್ಯ ವ್ಯಕ್ತಿಯಾಗಿರಲಿ. ಆತನಲ್ಲಿ ಪ್ರತಿಭೆಯಿದ್ರೆ ರಾತ್ರೋ ರಾತ್ರಿ ಫೇಮಸ್ ಆಗ್ತಾನೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಕುಂದಾಪುರದ ವೈಕುಂಟ ಅವರು. ಬಂಧು ಬಳಗ ಯಾರೂ ಇಲ್ಲದೆ ಅಲೆದಾಡ್ತಾ ಜೀವನ ಸಾಗಿದ್ತಾ ಇದ್ದ ಇವರಿಗೆ ಹಾಡೇ ಜೀವನಕ್ಕೆ ದಾರಿಯಾಯ್ತು. ಯಾವುದೇ ವಸ್ತುಗಳಿರಲಿ ಅದನ್ನ ಮ್ಯೂಸಿಕ್‍ಗೆ ಬಳಸಿ ತಮ್ಮ ಅದ್ಭುತ ಕಂಠದಿಂದ ಹಾಡ್ತಾ ಇದ್ರು.

ಆದ್ರೆ ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡು ಮನೆ ತ್ಯಜಿಸಿದ ವೈಕುಂಠ ಅವರು ಕಳೆದ ಕೆಲ ವರ್ಷಗಳಿಂದ ಕುಂದಾಪುರದ ಆಸುಪಾಸಿನಲ್ಲಿ ತಿರುಗಾಡಿ ಅವರಿವರು ಕೊಟ್ಟ ಹಣದಲ್ಲಿ ಊಟ ಮಾಡಿ ಶಾಸ್ತ್ರೀ ಸರ್ಕಲ್‍ನಲ್ಲಿರುವ ಇಂದಿರಾ ಕ್ಯಾಂಟೀನ್ ಹಿಂಬದಿಯ ಪಶು ಆಸ್ಪತ್ರೆಯ ಆವರಣದಲ್ಲಿ ಮಲಗಿ ದಿನ ಕಳೆಯುತ್ತಿದ್ದರು.
ಮೂರ್ನಾಲ್ಕು ವರ್ಷಗಳಿಂದ ವಾಟ್ಸಾಪ್, ಫೇಸ್‍ಬುಕ್‍ಗಳಲ್ಲಿ ವೈಕುಂಠ ಅವರು ಹಾಡಿರುವ ಕೆಲವು ಗೀತೆಗಳು ಸಾಕಷ್ಟು ವೈರಲ್ ಆಗಿದ್ದವು. ಆ ಬಳಿಕ ವೈಕುಂಠ ಕುಂದಾಪುರ ಜನತೆಗೆ ಚಿರಪರಿಚಿತರಾಗಿದ್ದರು. ಕುಂದಾಪುರದ ಹಲವು ಟ್ರೋಲ್ ಪೇಜ್‍ಗಳಲ್ಲಿ ವೈಕುಂಠ ಅವರ ಚಿತ್ರಗಳು, ವಿಡಿಯೋ ತುಣುಕುಗಳು ವೈರಲ್ ಆಗಿದ್ದು, ಕುಂದಾಪುರದ ಆಸುಪಾಸಿನಲ್ಲಿ ವೈಕುಂಠ ಅವರನ್ನು ನೋಡಿದಾಕ್ಷಣ ಎಲ್ಲರೂ ಅವರನ್ನು ಸಲುಗೆಯಿಂದ ಕರೆದು ಮಾತಾಡಿಸುತ್ತಿದ್ದರು. ಕೆಲ ಟ್ರೋಲ್ ಪೇಜ್‍ಗಳಲ್ಲಿ ವೈಕುಂಠ ಅವರಿಗೆ ರಾಕ್‍ಸ್ಟಾರ್ ಎಂಬ ಬಿರುದು ನೀಡಲಾಗಿದ್ದು, ಅವರನ್ನು ಹೀರೋ ಎಂಬಂತೆಯೂ ಬಿಂಬಿಸಲಾಗಿತ್ತು.

ಕೆಲವರು ವೈಕುಂಠ ಅವರ ಪ್ರತಿಭೆಯನ್ನು ಹೊರತರುವಲ್ಲಿ ಶ್ರಮಿಸಿದರೆ ಇನ್ನೂ ಕೆಲವರು ಅವರನ್ನು ಕೆಟ್ಟ ವಿಷಯಗಳಿಗೂ ಬಳಸಿಕೊಳ್ಳುತ್ತಿದ್ದರು. ಹಣದ ಆಮೀಷ ತೋರಿಸಿ ತಮಗೆ ಬೇಕಾದ ಹಾಗೆ ಅವರಿಂದ ಮಾತನಾಡಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದು, ಇನ್ನು ಕೆಲವರು ಮಧ್ಯಪಾನ ಮಾಡಿಸಿ ಅವರಿಂದ ಅವಾಚ್ಯ ಶಬ್ದಗಳಿಂದ ತಮ್ಮ ಸ್ನೇಹಿತರಿಗೆ ಬಯ್ಯಲು ಹೇಳಿ ವಿಕೃತ ಆನಂದ ಪಡುತ್ತಿದ್ದರು.

ಹಂಗಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನೇರಂಬಳ್ಳಿ ನಿವಾಸಿ ವೈಕುಂಠ ಕಳೆದ ನಾಲ್ಕು ದಿನಗಳಿಂದ ಕುಂದಾಪುರದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿರುವ ಪಶು ಆಸ್ಪತ್ರೆಯ ಆವರಣದಲ್ಲಿ ತೀವ್ರ ಅಸ್ವಸ್ಥಗೊಂಡು ಮಲಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈಕುಂಠ ಅಸ್ವಸ್ಥಗೊಂಡಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ ವೈಕುಂಠ ಅವರಿಗೆ ತುರ್ತು ಚಿಕಿತ್ಸೆ ನೀಡಲು ಸ್ಥಳೀಯ ಯುವಕರು ಮುಂದಾಗಿದ್ದು, ನೆಟ್ಟಿಗ ರಂಜಿತ್ ಹೆಂಗವಳ್ಳಿ ಮೊದಲಾದವರು ವೈಕುಂಠ ಅವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಶ್ರಮಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಇವ್ರ ಅಗಲುವಿಕೆಗೆ ಇಡೀ ಕುಂದಾಪುರದ ಜನತೆ ಕಂಬನಿ ಮಿಡಿದಿದ್ದಾರೆ.

Related posts

Leave a Reply

Your email address will not be published. Required fields are marked *