
ಪುುತ್ತೂರು: ಹಾರಾಡಿ ಶಾಲಾ ವಿದ್ಯಾಗಮ ತರಗತಿಗೆ ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ .ಸಿ. ಭೇಟಿ ನೀಡಿದರು. ತರಗತಿಯಲ್ಲಿರುವ ವಿದ್ಯಾರ್ಥಿಗಳೊಂದಿಗೆ ನಗುಮುಖದೊಂದಿಗೆ ಕುಶಲೋಪಚಾರ ಮಾಡುತ್ತಾ ಮಕ್ಕಳಲ್ಲಿ ಉತ್ಸಾಹ ತುಂಬಿದರು. ರಜಾ ಅವಧಿಯಲ್ಲಿ ಕಳೆದ ಸಮಯವನ್ನು ಮಕ್ಕಳಿಂದ ಕೇಳಿ ತಿಳಿದುಕೊಂಡರು.
ಕೈ ತೋಟ ರಚನೆ, ಅಡುಗೆ ತಯಾರಿ, ಕ್ರಾಫ್ಟ್, ಚಿತ್ರ ಕಲೆ ಚಟುವಟಿಕೆಗಳನ್ನು ಮಾಡುವ ಮೂಲಕ ಸಮಯದ ಸದುಪಯೋಗ ಮಾಡಿಕೊಂಡಿರುವ ಬಗ್ಗೆ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಅನುಭವ ಹಂಚಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೋವಿಡ್-19 ಮುಂಜಾಗರೂಕತೆ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಸಲಹೆ-ಸೂಚನೆಗಳನ್ನು ನೀಡಿ,ಶಾಲಾ ಪೂರ್ವ ತಯಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಿಯ ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು.