Header Ads
Header Ads
Breaking News

ಹಾಲಾಡಿಗೆ ಬಿಜೆಪಿಯ ಟಿಕೆಟ್ ಮೂಲ ಬಿಜೆಪಿಗರ ಅಸಮಾಧಾನ ಕುಂದಾಪುರದ 7 ಮುಖಂಡರ ರಾಜೀನಾಮೆ ರಾಜೀನಾಮೆ ಅಂಗೀಕರಿಸದ ಜಿಲ್ಲಾಧ್ಯಕ್ಷರು ಹಾಲಾಡಿ ವಿರುದ್ದ ಪ್ರಚಾರಕ್ಕೆ ಸಿದ್ಧರಾದ ಮುಖಂಡರು

ಅದು ಅಕ್ಷರಶ: ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನ. ಇದೀಗ ಅಭ್ಯರ್ಥಿಯ ಘೋಷಣೆಯಿಂದ ಆ ಅಸಮಾಧಾನ ಸ್ಪೋಟಗೊಂಡಿದೆ. ಪರಿಣಾಮ ಬಿಜೆಪಿಯ ಏಳು ಮುಖಂಡರು ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೆ ಕುಂದಾಪುರ ಕ್ಷೇತ್ರ ರಾಜ್ಯದ ಗಮನಸೆಳೆಯುತ್ತಿದೆ.ಇದು ಅಕ್ಷರಶ: ಹಲಾಡಿ ಬಣ ವರ್ಸಸ್ ಬಿಜೆಪಿ ಬಣದ ನಡುವಿನ ವೈಮನಸ್ಸು.. ಇದೀಗ ವೈಮಸ್ಸು ಸ್ಪೋಟಗೊಂಡಿದೆ.

ಬಿನ್ನಮತದ ಕಾರಣ ಬಿಜೆಪಿ ನಾಯಕರಿಗೆ ತಲೆ ನೋವಾಗಿದೆ. ಅಧಿಕಾರ ಸಿಕ್ಕಿಲ್ಲ ಎಂದ ಕಾರಣ ಹಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿಗೆ ರಾಜೀನಾಮೆ ಸಲ್ಲಿಸಿ ಪಕ್ಷೇತರನಾಗಿ ನಿಂತು ಸ್ಪರ್ದಿಸಿದ್ದು ಈಗ ಇತಿಹಾಸ.ಆದ್ರೆ ಮತ್ತೆ ಇದೀಗ ಬಿಜೆಪಿಯ ಬಾಗಿಲು ತಟ್ಟಿ ಟಿಕೆಟ್ ಪಡೆಯುವಲ್ಲೂ ಯಶಸ್ಸಾಗಿದ್ದಾರೆ ಶ್ರೀನಿವಾಸ್ ಶೆಟ್ಟ್ರು.ಆದ್ರೆ ಪಕ್ಷಾಂತರ ಪರ್ವದಿಂದ ಕುಂದಾಪುರದಲ್ಲಿ ಮೂಲ ಬಿಜೆಪಿಗರು ಸಾಕಷ್ಟು ಆಕ್ರೋಶಿತಗೊಂಡಿದ್ದರು. ಅದರ ಮುಂದಿನ ಭಾಗವೇ ಏಳು ಮುಖಂಡರ ರಾಜೀನಾಮೆ.ಯಸ್ ಹಾಲಾಡಿ ಯವರಿಗೆ ಬಿಜೆಪಿಗೆ ಟಿಕೆಟ್ ಸಿಗುತ್ತಿದ್ದಂತೆಯೇ ಇದನ್ನು ವಿರೋಧಿಸುತ್ತಿದ್ದ ಮೂಲ ಬಿಜೆಪಿಗರಿಗೆ ಸಾಕಷ್ಟು ಬೇಸರವಾಗಿದ್ದು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ತೋಡಿಕೊಂಡಿದ್ದು ಮಾತ್ರವಲ್ಲದೇ ಇದೀಗ ಜಿಲ್ಲಾದ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಅವರಿಗೆ ಜಿಲ್ಲಾಉಪಾದ್ಯಕ್ಷ ಕಿಶೋರ್ ಶೆಟ್ಟಿ, ಮುಖಂಡರಾದ ಸತೀಶ್ ಹೆಗ್ಡೆ, ರಾಜೇಶ್ ಕಾವೇರಿ ಸೇರಿದಂತೆ ಏಳು ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ.ಹಲಾಡಿಯವರನ್ನು ವಿರೋಧಿಸಿ ರಾಜೀನಾಮೆ ಸಲ್ಲಿಸಿದ ಮುಖಂಡರು ಹಾಲಾಡಿಯವರ ವಿರುದ್ದ ಕೆಲಸ ಮಾಡುವುದಾಗಿ ಗುಡುಗಿದ್ದಾರೆ.

ಯಾವುದೇ ಕಾರಣಕ್ಕೆ ಹಾಲಾಡಿಗೆ ಬೆಂಬಲ ಕೋಡೋದಿಲ್ಲ ಹೇಳುತ್ತಿರುವುದು ಬಿಜೆಪಿ ಮುಖಂಡರಿಗೆ ತಲೆನೋವಿಗೆ ಕಾರಣವಾಗಿದೆ. ಇತ್ತ ರಾಜೀನಾಮೆಯನ್ನು ಜಿಲ್ಲಾದ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಅಂಗೀಕರಿಸಿಲ್ಲ. ಅವರ ಜೊತೆ ಮಾತುಕತೆ ಮಾಡಿ ಬಂಡಾಯ ಶಮನಗೊಳಿಸುವುದಾಗಿ ಹೇಳಿದ್ದಾರೆ. ಬಂಡಾಯದ ಬಾವುಟ ಹಾರಿಸಿರುವ ಏಳು ಮುಖಂಡರು ಬಿಜೆಪಿ ಪಕ್ಷದಲ್ಲೇ ಉಳಿಯುವುದಾಗಿ ತಿಳಿಸಿದ್ದಾರೆ.ಇದು ಸ್ಪಲ್ಪ ಮಟ್ಟಿಗೆ ಸಮಾಧಾನ ತಂದರೂ ಹಾಲಾಡಿಯವರಿಗೆ ಮಾತ್ರ ಸಂಕಟ ತಪ್ಪಿಲ್ಲ.ಒಟ್ಟಿನಲ್ಲಿ ಕುಂದಾಪುರ ಕ್ಷೇತ್ರದಲ್ಲಿನ ಮೂಲ ಬಿಜೆಪಿಗರ ಅಸಮಾಧಾನ ಕೊನೆಯ ಹಂತಕ್ಕೆ ತಲುಪಿದೆ. ಚುನಾವಣೆಯಲ್ಲಿ ಹಲಾಡಿ ವಿರುದ್ದ ವರ್ಕ ಮಾಡುವುದಂತು ಶತ ಸಿದ್ದ ಎಂದು ಭಿನ್ನಮತೀಯರು ಹೇಳಿದ್ದಾರೆ. ಒಟ್ಟಾರೆ ಬೆಳವಣಿಗೆ ಮೂಲ ಬಿಜೆಪಿಗರನ್ನು ಬಿಜೆಪಿ ಪಕ್ಷ ಕಡೆಗಣಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ. ಇದಕ್ಕೆ ಪಕ್ಷ ಯಾವ ತಲೆದಂಡ ತೆರುತ್ತೆ ಎಂಬುದನ್ನ ಕಾದು ನೋಡಬೇಕಾಗಿದೆ.