Header Ads
Header Ads
Header Ads
Breaking News

ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿಯಿಂದ ಸ್ಪರ್ಧೆ ಖಚಿತ

ಕುಂದಾಪುರ: ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದಲೇ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ, ಸ್ಪಷ್ಟ ಬಹುಮತದಿಂದ ಗೆಲ್ಲುತ್ತಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ತಾಲೂಕಿನ ಹೆರಿಕುದ್ರುವಿನಲ್ಲಿ ಅಂಡರ್ ಪಾಸ್ ಸ್ಥಳ ವೀಕ್ಷಣೆಗೆಂದು ಬಂದ ಸಂಧರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೆಲವರು ಹಾಲಾಡಿಯವರ ವಿಚಾರದಲ್ಲಿ ಗೊಂದಲವನ್ನ ಸೃಷ್ಟಿ ಮಾಡಿದ್ದಾರೆ. ತಾಂತ್ರಿಕ ಕಾರಣದಿಂದ ಅವರು ಇನ್ನೂ ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಕಳೆದ ಲೋಕಸಭಾ ಚುನಾವಣೆಯಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ನಮ್ಮ ಪಕ್ಷಕ್ಕೆ ಬಂದು ಸ್ಪಷ್ಟ ಬಹುಮತದಿಂದ ಗೆಲ್ಲುತ್ತಾರೆ ಎಂದರು.

ಬೈಂದೂರು ವಿ.ಸ ಕ್ಷೇತ್ರದಿಂದ ಹಾಲಾಡಿಯವರನ್ನ ಕಣಕ್ಕಿಳಿಸುವ ಕುರಿತು ಮಾತನಾಡಿದ ಅವರು ಪಕ್ಷದ ಮುಖಂಡರು ಈಗಾಗಲೇ ಸ್ಪಷ್ಟ ಸೂಚನೆಯನ್ನ ನೀಡಿದ್ದಾರೆ. ಜನಬೆಂಬಲ ಹೊಂದಿರುವ ಅಭ್ಯರ್ಥಿಯನ್ನ ಅದೇ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಸೂಚನೆ ನೀಡಿದ್ದಾರೆ. ಈ ಕುರಿತು ಎಲ್ಲಾ ಕಡೆ ಸರ್ವೆಯನ್ನ ಮಾಡುತ್ತಿದ್ದಾರೆ. ಸರ್ವೆ ವರದಿಯ ಪ್ರಕಾರ ಯಾರಿಗೆ ಜನಬೆಂಬಲವಿದೆಯೋ ಅವರನ್ನ ಕಣಕ್ಕಿಳಿಸುತ್ತೇವೆ. ಕುಂದಾಪುರ ಕ್ಷೇತ್ರದಲ್ಲಿ ಮೊದಲಿನಿಂದಲೂ ಹಾಲಾಡಿಯವರಿಗೆ ಜನಬೆಂಬಲವಿದೆ ಆದ್ದರಿಂದ ಕುಂದಾಪುರಕ್ಕೆ ಹಾಲಾಡಿಯವರೇ ನಮ್ಮ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.

ಹೆರಿಕುದ್ರು ಜನರ ಬಹುದಿನದ ಬೇಡಿಕೆಯಾದ ಅಂಡರ್ ಪಾಸ್ ಕುರಿತು ನಿತಿನ್ ಗಡ್ಕರಿಯವರಿಗೆ ಮನವಿ ಮಾಡಿದಾಗ ಅವರು ಇದಕ್ಕೆ ಸಮ್ಮತಿಸಿ ಅನುಮೋಧನೆಯನ್ನು ನೀಡಿದ್ದಾರೆ. ಈ ಅಂಡರ್ ಪಾಸ್ ಕಾಮಗಾರಿ ಮುಂದಿನ ಮಳೆಗಾಲದೊಳಗೆ ಮುಗಿಸಿ, ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಇದೇ ಸಂಧರ್ಭದಲ್ಲಿ ಅಂಡರ್‌ಪಾಸ್‌ಗೆ ಅನುಮೋಧನೆ ದೊರಕಿದ್ದಕ್ಕೆ ಸ್ಥಳೀಯರು ಪಟಾಕಿ ಸಿಡಿಸುವ ಮೂಲಕ ಸಂಬ್ರಮಿಸಿದರು.

ಈ ಸಂದರ್ಭ ಕುಂದಾಪುರ ಬಿಜೆಪಿ ಮಂಡಳದ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ಕಿರಣ್ ಕೊಡ್ಗಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುರೇಶ್ ಶೆಟ್ಟಿ, ಸದಾನಂದ ಬಳ್ಕೂರು, ಸುನೀಲ್ ಶೆಟ್ಟಿ ಹೆರಿಕುದ್ರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply