Header Ads
Header Ads
Header Ads
Breaking News

ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸದ್ಯದಲ್ಲೇ ಬಿಜೆಪಿ ಸೇರ್ಪಡೆ ತಾಂತ್ರಿಕ ಸಮಸ್ಯೆ ಇರುವುದರಿಂದ ಸೇರ್ಪಡೆಗೆ ಅಡ್ಡಿ ಸಮಸ್ಯೆ ಪರಿಹಾರವಾದ ಕೂಡಲೇ ಬಿಜೆಪಿ ಸೇರ್ಪಡೆ ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಘೋಷಣೆ

 

ಹಾಲಾಡಿ ಶ್ರೀನಿವಾಸ ಶೆಟ್ಟಿ ಸದ್ಯ ದಲ್ಲೇ ಬಿಜೆಪಿ ಸೇರ್ಪಡೆ ಗೊಳ್ಳುವುದಾಗಿ ಘೋಷಿಸಿದ್ದಾರೆ. ಸದ್ಯ ತಾಂತ್ರಿಕ ಸಮಸ್ಯೆ ಇರುವುದರಿಂದ ಸೇರ್ಪಡೆಗೆ ಅಡ್ಡಿಯಾಗಿದ್ದು ತಾಂತ್ರಿಕ ಸಮಸ್ಯೆ ಪರಿಹಾರಗೊಂಡ ಬಳಿಕ ಸೇರ್ಪಡೆಗೊಂಡು ಸಾಮಾನ್ಯ ಕಾರ್ಯಕರ್ತ ನಂತೆ ಕೆಲಸ ಮಾಡುವುದಾಗಿ ತಿಳಿಸಿದರು. ಹಾಲಾಡಿ ಬಿಜೆಪಿಗೆ ಸೇರುವ ಮುನ್ನವೇ ಬಿಜೆಪಿಯಲ್ಲಿ ಒಡಕು ಸೃಷ್ಟಿಸಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು ನಾನು ಬಿಜೆಪಿಯಲ್ಲಿ ಯಾವುದೇ ಗೊಂದಲ ಸೃಷ್ಟಿಸಿಲ್ಲ. ಇದೇಲ್ಲ ಊಹಾಪೋಹಗಳು ಎಂದು ಆರೋಪವನ್ನ ತಳ್ಳಿಹಾಕಿದರು. ಬಿಜೆಪಿಯ ಪರಿವರ್ತನಾ ಸಮಾವೇಶದ ನೇತೃತ್ವವನ್ನ ನೀವು ವಹಿಸಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ನಾನು ಸಮಾವೇಶದಲ್ಲಿ ನಾನು ಯಾವುದೇ ನೇತೃತ್ವವಹಿಸಿಲ್ಲ ಆದರೆ ನಾನು ಸಭೆಯಲ್ಲಿ ಸಾಮಾನ್ಯ ಜನರಂತೆ ಕುಳಿತು ಭಾಗವಹಿಸುತ್ತೇನೆ. ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಕಟೌಟ್ಗಳಲ್ಲಿ ಹಾಲಾಡಿಯರ ಭಾವಚಿತ್ರ ಭಾವಚಿತ್ರ ಕ್ಕಿಂತ ಅಧಿಕವಿರುವ ಕುರಿತು ಉತ್ತರಿಸಿದ ಅವರು ನಾನು ಯಾರಿಗೂ ಭಾವಚಿತ್ರ ಅಳವಡಿಸುವಂತೆ ಹೇಳಿಲ್ಲ ಅವರು ಅಭಿಮಾನದಿಂದ ಹಾಕಿದ್ದಾರೆ ಅದನ್ನ ನಾನು ಆಕ್ಷೇಪ ವ್ಯಕ್ತಪಡಿಸಲ್ಲ ಆದರೆ ಮೊದಲು ನಾನು ಸೂಚಿಸಿದ್ದೇ ನನ್ನ ಯಾವುದೇ ಕಟೌಟ್ ಮತ್ತು ಬಂಟಿಂಗ್ಸ ಅಳವಡಿಸುವುದು ಬೇಡ ಎಂದು ಹೇಳಿದರು.

Related posts

Leave a Reply