Header Ads
Header Ads
Breaking News

ಹಾಲಿಗಿಲ್ಲ ಮಣೆ.. ಮಾಜಿಗೆ ಪಟ್ಟ.. ಜನ ತಿರಸ್ಕರಿಸಿದ್ದರೂ ಬೆಳಪುವಿನಲ್ಲಿ ಸೊರಕೆಯೇ ಶಾಸಕ..

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೊರಕೆಯನ್ನು ಜನ ತಿರಸ್ಕರಿದ್ದರೂ, ಬೆಳಪುವಿನಲ್ಲಿ ಇಂದಿಗೂ ಅವರೇ ಶಾಸಕರೇ ಎಂಬಂತ್ತೆ ಬಾಸವಾಗುತ್ತಿದ್ದು, ಎಲ್ಲೆದರಲ್ಲಿ ಸೊರಕೆಯ ಕಟೌಟ್‌ಗಳು ರಾರಾಜಿಸುತ್ತಿದ್ದು ಮಾತ್ರವಲ್ಲ, ಇಂದು ನಡೆದ ವಿಜ್ಞಾನ ಸಂಶೋಧನ ಕೇಂದ್ರದ ಭೂಮಿ ಪೂಜೆಯನ್ನು ಕೂಡಾ ಮಾಜಿ ಶಾಸಕರೇ ನೆರವೇರಿಸಿದ್ದರಿಂದ ಜನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಸಿದ್ಧರಾಮಯ್ಯನವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎರಡು ಬಾರಿ ಈ ಸಂಶೋಧನ ಕೇಂದ್ರಕ್ಕೆ ಬೇರೆ ಬೇರೆ ರೀತಿಯಲ್ಲಿ ಶಿಲಾನ್ಯಾಸ ನಡೆಸಿದ್ದರೂ, ಇದೀಗ ಭೂಮಿಪೂಜೆಯ ಹೆಸರಲ್ಲಿ ಮತ್ತೆ ಕಾರ್ಯಕ್ರಮ ಆಯೋಜಿಸುವ ಮೂಲಕ ಇದು ಕೇವಲ ಚುನಾವಣಾ ಗಿಮಿಕ್ಕೋ ಎನ್ನುತ್ತಿದ್ದಾರೆ ಜನ. ಈ ಕಾರ್ಯಕ್ರಮಕ್ಕೆ ಶಾಸಕರಲ್ಲಿ ವಿಚಾರಿಸಿ ದಿನ ನಿಗದಿ ಪಡಿಸಿಲ್ಲ, ಬದಲಾಗಿ ದಿನ ನಿಗದಿ ಪಡಿಸಿ ಶಾಸಕರಿಗೆ ತಿಳಿಸಲಾಗಿದ್ದು, ಆ ತಾರೀಕಿಗೆ ಹಾಸನದಲ್ಲಿ ಪಕ್ಷದ ನಿಗದಿತ ಕಾರ್ಯಕ್ರಮ ಇದ್ದ ಕಾರಣ ನನಗೆ ಬರಲಾಗುವುದಿಲ್ಲ ಕಾರ್ಯಕ್ರಮ ಮುಂದುವರಿಸಿ ಎಂದಿದ್ದೇನೆ ಎಂಬುದಾಗಿ ಶಾಸಕ ಲಾಲಾಜಿ ಮಾದ್ಯಮಕ್ಕೆ ತಿಳಿಸಿದ್ದಾರೆ.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸೊರಕೆ, ಬಹು ಕುಡಿಯುವ ನೀರಿನ ಯೋಜನೆಗೆ ಸಹಿತ ಡ್ರೈನೇಜ್ ನಿರ್ಮಾಣಕ್ಕೆ ಹಾಗೂ ಕಸದಿಂದ ಗೊಬ್ಬರ ತಯಾರಿಕ ಕಾಮಗಾರಿಗೂ ಜನ ವಿರೋಧ ವ್ಯಕ್ತ ಪಡಿಸುತ್ತಿದ್ದು, ಇದು ಸರಿಯಾದ ಕ್ರಮವಲ್ಲ.. ಜನರು ಯಾರೋ ಹೇಳಿದ ತಪ್ಪು ಸಂದೇಶವನ್ನು ನಂಬಿ ಇಂಥಹ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡವುದು ಸರಿಯಲ್ಲ ಎನ್ನುವ ಮೂಲಕ, ನಾನು ತಂದ ಯೋಜನೆಗಳ ಅನುಷ್ಠಾನ ಜಾರಿಯಾಗದಂತೆ ಜನರಿಗೆ ತಪ್ಪು ಸಂದೇಶ ನೀಡುವವರು ಬಿಜೆಪಿಗರು ಎಂಬುದಾಗಿ ಪರೋಕ್ಷವಾಗಿ ಆರೋಪಿಸಿದ್ದಾರೆ.
ಈ ಸಂದರ್ಭ ಬೆಳಪು ದೇವಿ ಪ್ರಸಾದ್ ಶೆಟ್ಟಿ, ವಾಸುದೇವ ಶೆಟ್ಟಿ, ಹನೀಫ್ ಹೆಜಮಾಡಿ, ಶರತ್, ಜಾಹೀರ್ ಬೆಳಪು, ಶೋಭ ಭಟ್ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *