Header Ads
Header Ads
Breaking News

ಹಾಲಿನ ಉತ್ಪನ್ನಗಳ ಬಗ್ಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅರಿವು ಪ್ರಾಥಮಿಕ, ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜನೆ ನ.11 ರಂದು ಕಿದಿಯೂರು ಹೊಟೇಲ್‌ನಲ್ಲಿ ನಡೆಯಲಿರುವ ಸ್ಪರ್ಧೆ ಉಡುಪಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ

ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಹಿನ್ನಲೆಯಲ್ಲಿ ಜಿಲ್ಲೆಯ 5 ರಿಂದ 7 ನೇ ತರಗತಿಯ ಮಕ್ಕಳಿಗೆ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಮತ್ತು ೮ರಿಂದ 10 ನೇ ತರಗತಿಯ ಮಕ್ಕಳಿಗೆ ಹೈನುಗಾರಿಕೆಯಿಂದ ಸ್ವ ಉದ್ಯೋಗ ಎಂಬ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅದ್ಯಕ್ಷ ರವಿರಾಜ್ ಹೆಗ್ಡೆ ನ.11 ರಂದು ಕಿದಿಯೂರು ಹೊಟೇಲ್ ನಲ್ಲಿ ಈ ಸ್ಪರ್ದೆಯನ್ನು ಆಯೋಜಿಸಲಾಗಿದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಖಾಸಗೀ ಶಾಲೆಯ ಮಕ್ಕಳು ಭಾಗವಹಿಸಬಹುದು. ಆದ್ರೆ ಪ್ರತೀ ಶಾಲೆಯಿಂದ ಇಬ್ಬರಿಗೆ ಮಾತ್ರ ಅವಕಾಶ ಇದ್ದು ಭಾಗವಹಿಸುವ ಮಕ್ಕಳ ಪ್ರಯಾಣ ವೆಚ್ಚ ಹಾಗೂ ಸ್ಪರ್ಧೆಗೆ ಬೇಕಾಗುವ ಪರಿಕರವನ್ನು ಉಚಿತವಾಗಿ ನಿಡಲಾಗುತ್ತದೆ. ಪ್ರಥಮ 10 ಸಾವಿರ, ದ್ವಿತೀಯ ೬ ಸಾವಿರ, ತೃತೀಯ ಮೂರು ಹಾಗೂ 15 ಮಕ್ಕಳಿಗೆ 1 ಸಾವಿರದಂತೆ ಸಮಾಧಾನಕರ ಬಹುಮಾನ ನೀಡಲಾಗುವುದು.ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು ಡಿಸಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ದೀಪ ಬೆಳಗಿಸುವ ಮೂಲಕ ಸ್ಪರ್ದೆಗೆ ಚಾಲನೆ ನಿಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವರದಿ: ಪಲ್ಲವಿ ಸಂತೋಷ್