Header Ads
Breaking News

ಹಾಲೆ ಮರದ ಕಷಾಯ ಕುಡಿಯೋ ಸಂಪ್ರದಾಯ. ಇಂದು ಆಟಿ ಅಮವಾಸ್ಯೆಯ ಹಿನ್ನಲೆಯಲ್ಲಿ ಕಷಾಯ. ಆರೋಗ್ಯದ ದೃಷ್ಟಿಯಿಂದ ಮಹತ್ವ ಪಡೆದ ಹಾಲೆ ಮರದ ಕಷಾಯ.

ಆಟಿ ಅಂದ್ ಕೂಡಲೇ ನಮಗೆ ನೆನಪಾಗುವುದು ಧೋ ಎಂದು ಸುರಿಯೋ ಮಳೆ. ಕರಾವಳಿಯ ಬಿರುಬಿಸಿಲಿಗೆ ಬೇಸತ್ತ ಜನತೆಗೆ ಆಷಾಢ ಮಾಸ ತಂಪರೆಯುವ ದಿನ. ಈ ಕಾಲದಲ್ಲಿ ರೋಗಗಳ ಹಾವಳಿ ಪ್ರತೀ ಜನರನ್ನು ಬೆಂಬಿಡದೆ ಕಾಡುತ್ತೆ. ವೈದ್ಯರಿಲ್ಲದ ಆ ಕಾಲದಲ್ಲಿ ಜನತೆ ಕಂಡು ಕೊಂಡ ಹಳ್ಳಿ ಮದ್ದೆ ಹಾಲೇ ಕಷಾಯ. ಈ ಕಷಾಯದ ಮಹತ್ವವನ್ನು ತಿಳಿಬೇಕಾದ್ರೆ ನೀವು ಈ ಸ್ಟೋರಿನ ನೋಡ್ಲೇಬೇಕು.ತುಳುನಾಡಿನಲ್ಲಿ ಆಟಿ ಅಮವಾಸೆಗೆ ವಿಶೇಷ ಸ್ಥಾನಮಾನವಿದೆ. ಆಷಾಡ ತಿಂಗಳಲ್ಲಿ ಬರುವ ಈ ಅಮವ್ಯಾಸೆಗೆ ಬಹಳಷ್ಟು ಪ್ರಾಮುಖ್ಯತೆ ಇರುತ್ತದೆ. ಈ ದಿನ ಹಾಳೆ ಮರದ ತೊಗಟೆಯ ಕಷಾಯ ಕುಡಿಯುವುದು ವಾಡಿಕೆ. ನಸುಕಿನಲ್ಲಿ ಎದ್ದು ಹಾಲೆ ಮರದ ತೊಗಟೆಯನ್ನು ಕಲ್ಲಿನಲ್ಲಿ ಜಜ್ಜಿ ತೆಗೆದು ಕಲ್ಲಿನಿಂದಲೇ ತೊಗಟೆ ಸ್ವಚ್ಛಗೊಳಿಸಿ ಗುದ್ದಿ ರಸ ತೆಗೆಯಲಾಗುತ್ತದೆ.

ನಂತರ ಈ ರಸದೊಂದಿಗೆ ಬೆಳ್ಳುಳ್ಳಿ, ವಾಮ, ಕರಿಮೆಣಸನ್ನು ಕಡೆದು ಸೇರಿಸಿ ಕಷಾಯವನ್ನು ತಯಾರಿಸಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿಯೇ ಕಷಾಯವನ್ನು ಸೇವಿಸಿದ ನಂತರ ಇದಕ್ಕೆ ಪೂರಕವಾಗಿ ಮೆಂತೆ ಗಂಜಿಯನ್ನು ಸೇವಿಸಲಾಗುತ್ತದೆ. ಆಟಿ ಅಮವಾಸೆ ದಿನವಾದ ಇಂದು ಕರಾವಳಿಯಲ್ಲಿ ಅನೇಕ ಜನರು ಈ ಕಷಾಯವನ್ನು ಸಿದ್ಧಪಡಿಸಿ ಸೇವಿಸಿ ಸಂಭ್ರಮಿಸಿದ್ರು.ಆಟಿ ಅಮವಾಸ್ಯೆಯ ಮೊದಲ ದಿನವೇ ಈ ಮರವನ್ನು ಗುರುತಿಸಲಾಗುತ್ತೆ. ಬೆಳಗಿನ ಜಾವ ಬೆಳಕು ಹರಿಯೋದಕ್ಕೆ ಮುನ್ನವೇ ಈ ಮರದ ಕೆತ್ತೆಯನ್ನು ಗುದ್ದಿ ತೆಗೆಯಲಾಗುತ್ತೆ. ಬೆತ್ತಲಾಗಿ ಕೆತ್ತೆಯನ್ನು ತೆಗೆಯಬೇಕು ಎಂಬ ಸಂಪ್ರದಾಯವಿದ್ದರೂ ಕಾಲದ ಬದಲಾವಣೆಗೆ ಈ ಸಂಪ್ರದಾಯ ಮಾಯವಾಗಿದೆ. ಹಾಲೆ ಕಷಾಯ ಆಯುರ್ವೇದ ಗುಣವನ್ನು ಹೊಂದಿದ್ದು ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಅತೀಸಾರ,ಅಜೀರ್ಣ, ಜಠರ ಸಂಬಂಧಿ ಕಾಯಿಲೆಗೆ ರಾಮಬಾಣವಾಗಿದೆ. ಅಲ್ಲದೇ ಗರ್ಭೀಣಿ ಮಹಿಳೆಯರು ಈ ಕಷಾಯವನ್ನು ಸೇವಿಸಿದ್ರೆ ಬಲವರ್ಧಕರಾಗುತ್ತಾರೆ ಎಂಬ ನಂಬಿಕೆ ಕೂಡಾ ತುಳವರಲ್ಲಿದೆ. ಹೀಗಾಗಿ ಆಟಿ ಅಮಾವಾಸ್ಯೆ ದಿನ ಕರಾವಳಿ ಮಂದಿ ಈ ಕಷಾಯ ಸೇವಿಸುತ್ತಾರೆ.ತುಳುನಾಡಿನ ಆಟಿಯ ಈ ವಿಶೇಷ ಆಚರಣೆ ಇಂದಿಗೂ ನಂಬಿಕೆಯ ನೆಲೆಗಟ್ಟಿನ ಮೇಲೆ ನಡೆದುಕೊಂಡು ಬರುತ್ತಿದೆ. ಇದರಲ್ಲಿಯೂ ಹಾಲೆ ಕಷಾಯ ಸೇವನೆಯ ಆಚರಣೆ ಯುವಜನಾಂಗದಲ್ಲಿ ವಿಶಿಷ್ಟ ರೋಮಾಂಚನವನ್ನು ಹುಟ್ಟಿಸುತ್ತಿದೆ ಎಂಬುವುದು ಗಮನಾರ್ಹ ಸಂಗತಿ.

Related posts

Leave a Reply