
ಹಾಸನ ಜಿಲ್ಲೆ ಆಲೂರು ತಾಲೂಕು ಬೈರಾಪುರದಲ್ಲಿ ಇಂದು ಬೆಳಿಗ್ಗೆ ಏಳರಿಂದ ಗ್ರಾಮ ಪಂಚಾಯತಿ ಚುನಾವಣೆ ಮತದಾನ ಪ್ರಾರಂಭವಾಗಿದ್ದು ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ ಈಗಾಗಲೇ ಶೇಕಡ ಇಪ್ಪತ್ತು ರಷ್ಟು ಮತದಾನ ಮುಕ್ತಾಯವಾಗಿದ್ದು ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಂತಿಯುತವಾಗಿ ಮತದಾನ ನಡೆದಿದೆ. ಈ ಕುರಿತಾಗಿ ಮಾತನಾಡಿದ ಅಭ್ಯರ್ಥಿಗಳು ಮತ ಗ್ರಾಮಸ್ಥರು ನಮ್ಮ ಊರಿನಲ್ಲಿ ಇವರು ಯಾವುದೇ ಅಂತಹ ಅಹಿತಕರ ಘಟನೆ ನಡೆದಿರಲಿಲ್ಲ ಹಾಗೂ ಗ್ರಾಮದ ಅಭಿವೃದ್ಧಿಗೆ ಯಾರು ಪೂರಕವಾಗಿ ಕೆಲಸ ಮಾಡುವವರು ಅಂತಹ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಿದೆ ಮತ್ತು ಇನ್ನು ಮುಂದೆಯೂ ಕೂಡ ಗ್ರಾಮದಲ್ಲಿ ಮತದಾನ ಶಾಂತಿಯುತ ನಡೆಯುತ್ತಿದೆ ಎಂದು ಹೇಳಿದರು
ಭೈರಾಪುರ ಮಾಜಿ ಅಧ್ಯಕ್ಷ ವೀರಭದ್ರಸ್ವಾಮಿ ಅವರು ಈಗಾಗಲೇ ಶೇಕಡಾ ಇಪ್ಪತ್ತರಷ್ಟು ಮತದಾನ ನಡೆದು ಬೆಳಗಿನಿಂದ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ. ಶಾಂತಿಯುತವಾಗಿ ಮತದಾನ ನಡೆಯುತ್ತಿದೆ ಮುಂದೆಯೂ ಕೂಡ ಇದೇ ರೀತಿ ನಡೆಯಬೇಕೆಂದು ಮತದಾರರಲ್ಲಿ ಕೇಳಿಕೊಂಡರು.
ಮತ್ತೊಬ್ಬ ಅಭ್ಯರ್ಥಿ ಅಶೋಕ್ ಸಿ.ಡಿ. ಮಾತನಾಡಿ ಯಾರು ಗ್ರಾಮದ ಅಭಿವೃದ್ಧಿ ಕೆಲಸವನ್ನು ಮಾಡುವವರು ಮತ್ತು ಗ್ರಾಮದ ಗ್ರಾಮಸ್ಥರ ಕಷ್ಟ ಸುಖಗಳಿಗೆ ಸ್ಪಂದಿಸಿದವರು ಅಂತಹ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಕೇಳಿಕೊಂಡರು
ಚುನಾವಣಾ ಅಭ್ಯರ್ಥಿ ರುದ್ರೇಗೌಡ ಮಾತನಾಡಿ ಬೈರಾಪುರದಲ್ಲಿ ಬೆಳಗ್ಗೆ 7ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು ಭೈರಾಪುರ ಕ್ಷೇತ್ರವನ್ನು ಸೂಕ್ಷ್ಮ ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸದೆ ಅದಾಗ್ಯೂ ಕೂಡ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಇಲ್ಲಿ 13 ಜನ ಅಭ್ಯರ್ಥಿಗಳು ಕಣದಲ್ಲಿದ್ದು ಮತದಾರ ಬಂಧುಗಳು ಎಂದು ಅಭ್ಯರ್ಥಿ ಗಳ ಭವಿಷ್ಯ ತೀರ್ಮಾನ ಮಾಡಲಿದ್ದಾರೆಂದು ತಿಳಿಸಿದರು.