Header Ads
Header Ads
Breaking News

ಹಾಸ್ಯ ಕಲಾವಿದ ಅನಿಲ್ ಸಾಂತಿಜ ವಿಧಿವಶ.. ವಿ4 ನ್ಯೂಸ್ ಸಿಪಿ‌ಎಲ್ ಕಲಾವಿದ ನಾಟಕ ರಂಗಕ್ಕೆ ತುಂಬಲಾರದ ನಷ್ಟ

ಪಡುಬಿದ್ರಿ: ಪಲ್ಲವಿ ಕಲಾವಿದೆರ್ ಕಾರ್ಲ ತಂಡದ ಹಾಸ್ಯ ಕಲಾವಿಧ, ನಾಟಕ ರಚನೆಗಾರ ಸಾಣೂರು ದೂಪದಕಟ್ಟೆ ಪನೆತ್ತಿಲ್ ಹೌಸ್ ನಿವಾಸಿ ಅನಿಲ್ ಸಾಂತಿಜ ಹೃದಯಘಾತಕ್ಕೆ ಬಲಿಯಾಗಿದ್ದು, ಬೆಳೆಯುವ ಪ್ರತಿಭೆ ಚಿಗುರಲ್ಲೇ ಕಳಚಿ ಬೀಳುವ ಮೂಲಕ ನಾಟಕರಂಗಕ್ಕೆ ತುಂಬಲಾದ ನಷ್ಟ ಸಂಭವಿಸಿದಂತ್ತಾಗಿದೆ.

ತನ್ನ ಶಾಲಾ ದಿನಗಳಲ್ಲೇ ಛದ್ಮವೇಷ ಸ್ಪರ್ಧೆಗಳಲ್ಲಿ ಭಾಗವಹಿಸಿ ರಂಗದ ಗೀಳು ಹಚ್ಚಿಕೊಂಡ ಅನಿಲ್, ತನ್ನೂರ ಸಂಸ್ಥೆಯೊಂದರ ವಾರ್ಷಿಕೋತ್ಸವದಲ್ಲಿ ನಾಟಕ ರಂಗಕ್ಕೆ ಕಾಲಿರಿದ್ದರು. ಆ ಬಳಿಕ ಅಭಿನಯದೊಂದಿಗೆ ನಾಟಕ ರಚನೆಯನ್ನು ಮಾಡುವ ಮೂಲಕ ಜನಮೆಚ್ಚುಗೆ ಪಡೆದಿದ್ದರು. ಇದೀಗ ವಿ4 ನ್ಯೂಸ್ ಚ್ಯಾನಲ್‌ನಲ್ಲಿ ಪ್ರಸಾರವಾಗುತ್ತಿರುವ ನಗೆಹಬ್ಬ ಸಿಪಿ‌ಎಲ್ ಕಾಮಿಡಿ ಶೋ ನಲ್ಲಿ ಕಾರ್ಕಳ ಪಲ್ಲವಿ ಕಲಾವಿದೆರ್ ತಂಡದಲ್ಲಿ ಮುಖ್ಯ ಹಾಸ್ಯ ಕಲಾವಿದನಾಗಿ ಮಿಂಚುತ್ತಿದ್ದರು.

ಸಿಮೆಂಟು ಗಾರೆಯ ಗುತ್ತಿಗೆ ವಹಿಸಿಕೊಳ್ಳುತ್ತಿದ್ದ ಇವರು, ಭಾನುವಾರ ರಜಾದಿನವಾದ ಕಾರಣ ಸಹೋದರ ಹಾಗೂ ಗೆಳೆಯರೊಂದಿಗೆ ಸೇರಿಕೊಂಡು ಪಕ್ಕದ ಕೆರೆಯೊಂದಕ್ಕೆ ಮೀನು ಹಿಡಿಯಲು ಮುಂಜಾನೆ 10 ಗಂಟೆಗೆ ಹೋಗಿದ್ದರು. ಮಧ್ಯಾಹ್ನ ಎರಡು ಇಪ್ಪತ್ತರ ಸುಮಾರಿಗೆ ಮೀನು ಹಿಡಿದುಕೊಂಡು ಸಹಪಾಠಿಗಳು ಮೇಲೆ ಬರುತ್ತಿದ್ದಂತೆ ಭರ್ಜರಿಯಾಗಿ ಬಲೆಬಿದ್ದ ಮೀನು ನೋಡಿ ಆಶ್ಚರ್ಯ ಚಕಿತನಾಗಿ ಕುಸಿದು ಬಿದ್ದ ಈತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಫಲಕಾರಿಯಾಗಿಲ್ಲ ಎಂಬುದಾಗಿ ಮೃತರ ಸಹೋದರನ ನೋವಿನ ನುಡಿ.

ಸಣ್ಣದರಲ್ಲೇ ಆಸ್ಪತ್ರೆಯಲ್ಲಿನ ವಾಸನೆ ಸೇವನೆಯಿಂದ ತಲೆ ಸುತ್ತು ಬರುತ್ತಿತ್ತು ಈತನಿಗೆ. ದೊಡ್ಡವನಾಗುತ್ತಿದಂತೆ ಅದು ಕಡಿಮೆಯಾಗಿತ್ತಾದರೂ, ನಾಟಕದ ಗೀಳಿನಿಂದಾಗಿ ನಿದ್ಧೆ ಬಿಡುವುದು, ಹೊತ್ತಿಗೆ ಸರಿಯಾದ ಆಹಾರವಿಲ್ಲದೆ ಆರೋಗ್ಯ ಹಾಳು ಮಾಡಿಕೊಂಡಿದ್ದ, ಯಾವುದೇ ದುಚ್ಚಟವಿಲ್ಲದ ಈತನಿಗೆ ಈ ರೀತಿಯ ಸಾವು ಬರುತ್ತದೆ ಎಂಬುದನ್ನು ನಾವು ನಿರೀಕ್ಷೆಯೂ ಮಾಡಿಲ್ಲ ಎಂಬುದಾಗಿ ಸಹೋದರ ಕಣ್ಣೀರಿಡುತ್ತಾರೆ.

Related posts

Leave a Reply