Header Ads
Header Ads
Breaking News

ಹಿಂಜಾವೇ ಜಿಲ್ಲಾ ಅಧ್ಯಕ್ಷ ರತ್ನಾಕರ್ ಶೆಟ್ಟಿಗೆ ಗಡಿಪಾರು ಪೊಲೀಸ್ ಇಲಾಖೆಯಿಂದ ಗಡಿಪಾರು ನೊಟೀಸ್ ಜಾರಿ ಗಡಿಪಾರು ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು ಹಿಂದೂ ಜಾಗರಣ ವೇದಿಕೆ ಆಗ್ರಹ

 

ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಅಧ್ಯಕ್ಷ ರತ್ನಾಕರ ಶೆಟ್ಟಿ ಅವರಿಗೆ ಪೊಲೀಸ್ ಇಲಾಖೆಯಿಂದ ಗಡೀಪಾರು ನೊಟೀಸ್ ಜಾರಿಯಾಗಿದೆ. ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ಕೇಳಲಾಗಿದೆ. ಅವರನ್ನು ಗಡೀಪಾರು ಮಾಡುವ ನಿರ್ಧಾರದಿಂದ ಇಲಾಖೆ ತಕ್ಷಣ ಹಿಂದೆ ಸರಿಯಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

2009 ರಿಂದ 2017 ರವರೆಗೂ ರತ್ನಾಕರ ಶೆಟ್ಟಿ ಅವರ ಮೇಲೆ ಯಾವುದೇ ಕ್ರಿಮಿನಲ್ ಕೇಸು ದಾಖಲಾಗಿಲ್ಲ. ಅದರ ಹಿಂದೆ ದಾಖಲಾಗಿದ್ದರೂ ಅದರಲ್ಲಿ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದ್ದರು. ಈ ವರ್ಷ ಜೂನ್ ತಿಂಗಳಲ್ಲಿ ಕಲ್ಲಡ್ಕದಲ್ಲಿ ನಡೆದ ಘಟನೆಯಲ್ಲಿ ಖಲೀಲ್ ಎಂಬ ವ್ಯಕ್ತಿ ರತ್ನಾಕರ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡ ಅವರು ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿದ್ದರು. ಆದರೆ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ರತ್ನಾಕರ ಶೆಟ್ಟಿ ಅವರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದೆ. ಇದೀಗ ಗಡೀಪಾರು ನೊಟೀಸ್ ಜಾರಿ ಮಾಡಿದೆ. ಇದು ಅನ್ಯಾಯ ಎಂದರು.ಹಿಂದೂ ಜಾಗರಣ ವೇದಿಕೆಯ ವಿಭಾಗ ಸಹ ಸಂಚಾಲಕ ರವಿರಾಜ ಶೆಟ್ಟಿ ಕಡಬ, ಮಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಡೀಲ್, ಉಪಸ್ಥಿತರಿದ್ದರು.