Header Ads
Header Ads
Breaking News

ಹಿಂಜಾವೇ ವತಿಯಿಂದ ಸತ್ಯನಾರಾಯಣ ಪೂಜೆ:ಕುಂಪಲ ಆಶ್ರಯ ಕಾಲನಿ ಮೈದಾನದಲ್ಲಿ ಧಾರ್ಮಿಕ ಸಭೆ

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಹಿಂದು ಜಾಗರಣ ವೇದಿಕೆ ಓಂ ಶಕ್ತಿ ಘಟಕ ಕುಂಪಲ ಇವರ ಆಶ್ರಯದಲ್ಲಿ ೯ ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ ಕುಂಪಲದ ಆಶ್ರಯ ಕಾಲನಿ ಮೈದಾನದಲ್ಲಿ ನಡೆಯಿತು.

ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮುಖ್ಯ ಅತಿಥಿ ಭಾಗವಹಿಸಿ ಮಾತನಾಡಿ, ಹಿಂದೂಗಳು ಸಂಘಟಿತರಾಗದೇ ಇದ್ದಲ್ಲಿ ಶಬರಿಮಲೆ ದಕ್ಷಿಣದ ಅಯೋಧ್ಯೆ ಆಗುವುದರಲ್ಲಿ ಸಂಶಯವಿಲ್ಲ. ಬೇರೆ ಸಮುದಾಯದ ಮಹಿಳೆಯರು ಹೋರಾಟದ ಹೆಸರಲ್ಲಿ ೮೦೦ ವರ್ಷಗಳ ಪಾವಿತ್ರ್ಯತೆಯನ್ನು ಹಾಳುಗೆಡವಲು ಯತ್ನಿಸುತ್ತಿರುವುದು ಹಿಂದೂ ಸಮಾಜ ಒಗ್ಗಟ್ಟಾಗಲು ನೀಡಿರುವ ಸೂಚನೆ. ಶಬರಿಮಲೆಯನ್ನು ಪಾವಿತ್ರ್ಯತೆಯನ್ನು ಕೆಡವಲು ಅಲ್ಲಿನ ಸಿಪಿಎಂ ಸರಕಾರ ಮತ್ತು ಕೆಲ ಹಿಂದೂ ವಿರೋಧಿಗಳಿಂದ ನಡೆಯುತ್ತಿದೆ ಎಂದರು.

ಈ ಸಂದರ್ಭ ಹಿಂ.ಜಾ.ವೇ ವಿಭಾಗ ಪ್ರಧಾನ ಕಾರ್‍ಯದರ್ಶಿ ರವಿರಾಜ್ ಬಿ.ಸಿ.ರೋಡ್, ಮುಡಿಪು ಧಾರ್ಮಿಕ ಮುಖಂಡ ಕರುಣಾಕರ್ ಶೆಟ್ಟಿ , ಉದ್ಯಮಿ ಅಜಿತ್ ಕುಮಾರ್, ಕುಂಪಲ ಬಾಲಕೃಷ್ಣ ಮಂದಿರದ ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ವೆಂಕಟೇಶ್ ಮತ್ತಿತರರಯ ಉಪಸ್ಥಿತರಿದ್ದರು.

Related posts

Leave a Reply