
ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರುಗದ್ದೆಯಲ್ಲಿ ಬೃಹತ್ ಹಿಂದೂ ಐಕ್ಯತಾ ಸಮಾವೇಶ ನಡೆಯಿತು. ಹಿಂದೂ ಐಕ್ಯತಾ ಸಮಾವೇಶದ ಧರ್ಮಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಜಗದೀಶ್ ಕಾರಂತ್ ಅವರು, ಸಮಾಜವನ್ನು ಕಾಯುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಹಿಂದೂ ಅನ್ನುವುದು ಘೋಷಣೆ ಅಲ್ಲ. ಹಿಂದೂ ಅನ್ನುವುದು ಆಚರಣೆ ಆಗಬೇಕು. ಅದಕ್ಕೆ ಈ ಹಿಂದು ಸಮಾಜ ಬದ್ದವಾಗಬೇಕು ಎಂದು ಹೇಳಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ ಮಂದಿರ ನಿರ್ಮಾಣ ಮಾಡೋದು ಒಂದು ಕಾಲದಲ್ಲಿ ಬಹಳ ದೊಡ್ಡ ಕೆಲಸ ಆಗಿತ್ತು. ಆದರೆ ಇವತ್ತು ರಾಮ ಭಕ್ತರು ರಾಮಮಂದಿರ ದೊಡ್ಡ ಕೆಲಸ ಅಲ್ಲ ಎಂದು ತೀರ್ಮಾಣ ಮಾಡಿದ್ದಾರೆ. ಆ ಮಂದಿರ ಮಂದಿರವಾಗಿಯೇ ಉಳಿಯಬೇಕಾದರೆ ರಾಮ ರಾಜ್ಯದ ಕನಸು ನನಸಾಗಬೇಕು ಎಂದ್ರು.
ಈ ವೇಳೆ ಒಡಿಯೂರು ಶ್ರೀಗುರುದೇವನಂದ ಸ್ವಾಮೀಜಿ, ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹಮದಾಸ ಪರಮಹಂಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರೆಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ, ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿ, ಬ್ರಹ್ಮಶ್ರೀ ವೇದ ಮೂರ್ತಿ ಕುಂಟಾರು ರವೀಶ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.