Header Ads
Header Ads
Breaking News

ಹಿಂದೂ ಧರ್ಮಕ್ಕೆ ಧಕ್ಕೆ ಉಂಟು ಮಾಡಿದ ಟಿಪ್ಪು ಜಯಂತಿಗೆ ವಿರೋಧ:ವೆಂಕಟ್ ವಳಲಂಬೆ ಹೇಳಿಕೆ

ರಾಜ್ಯದ ಸರಕಾರ ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತನೆ ಜಯಂತಿಗಳ ಆಚರಣೆ ನೆಪದಲ್ಲಿ ಮಾಡುತ್ತಿದೆ. ದೇಶದಲ್ಲಿ ಹಿಂಸಾಚಾರ, ಅಕ್ರಮ ಮತ್ತು ಧಾರ್ಮಿಕ ಮಂದಿರಗಳ ನಾಶವನ್ನು ಮಾಡಿದ ಟಿಪ್ಪು ಸುಲ್ತಾನ್‌ನ ಜಯಂತಿಯನ್ನು ಆಚರಿಸಲು ಬಿಜೆಪಿಯ ವಿರೋಧವಿದೆ ಎಂದು ಸುಳ್ಯ ಬಿ.ಜೆ.ಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ಈ ರೀತಿಯ ಜಯಂತಿ ಆಚರಣೆಗೆ ನಿರ್ಧರಿಸಿದೆ. ಇದರಿಂದ ಜನರಿಗೆ ತೊಂದರೆಯಾದರೆ ಸರಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ, ಎ.ಪಿ. ಎಂ.ಸಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಹರೀಶ್ ಉಬರಡ್ಕ, ಸುಭೋದ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply