
ವಿ.ಹಿಂಪ ಬಜರಂಗದಳ ಉಳ್ಳಾಲ ಪ್ರಖಂಡ ಉಳ್ಳಾಲ ಪರಿಸರದಲ್ಲಿ ನಡೆಯುವ ಹಿಂದೂ ವಿರೋಧಿ ಕೃತ್ಯಗಳನ್ನು ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವ ಹುನ್ನಾರದ ವಿರುದ್ದ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯು ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ವಿ.ಹಿಂ.ಪ ಬಜರಂಗದಳ ವತಿಯಿಂದ ನಡೆಯಿತು.
ಈ ವೇಳೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಮಂಗಳೂರು ಕ್ಷೇತ್ರದ ಶಾಸಕರೇ ಬೆಂಗಳೂರಿಗೆ ಹೋಗುವುದನ್ನು ಕಡಿಮೆ ಮಾಡಿ ಉಳ್ಳಾಲದಲ್ಲಿ ಸುತ್ತು ಹಾಕಿ ಇಲ್ಲಿನ ವಿಚಾರಗಳನ್ನು ಅರಿವು ಮಾಡಿಕೊಳ್ಳಲಿ. ಮಂದಿರ, ಕಟ್ಟೆಯಲ್ಲಿ ಇಂತಹ ಘಟನೆ ನಡೆದಿದೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ ಭಾರತ ದೇಶವನ್ನು ನಾಶ ಮಾಡಬೇಕಾದರೆ ಹಿಂದೂ ಧರ್ಮವನ್ನು ನಾಶ ಮಾಡಿದರೆ ಸಾಕು ಈ ನಿಟ್ಟಿನಲ್ಲಿ ದೇಶವನ್ನು ಇಸ್ಲಾಮಿಕರಣ ಮಾಡುವ ಷಡ್ಯಂತ್ರ ನಡೆಯುತ್ತಿದ್ದು ಇದರ ಒಂದು ಆಂಗವಾಗಿ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಹಾನಿ ಮಾಡುವ ಕಾರ್ಯ ನಡೆಯುತ್ತಿದೆ ಎಂದರು. ಈ ವೇಳೆ ಭಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಸಂಚಾಲಕ ಗುರು ಉಳ್ಳಾಲಬೈಲು ಮತ್ತಿತರರು ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ರು.