Header Ads
Header Ads
Breaking News

ಹಿಂದೂ ಮಹಾಸಭಾದಿಂದ ಗಾಂಧಿಗೆ ಅವಮಾನ ಪ್ರಕರಣ : ಮಂಗಳೂರಿನ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಧರಣಿ

ಹುತಾತ್ಮ ದಿನದಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಯನ್ನ ಮರುಸೃಷ್ಟಿಸಿ ಸಂಭ್ರಮಿಸಿದ ಗೋಡ್ಸೆ ಅನುಯಾನಿಗಳ ಹೇಯ ಕೃತ್ಯವನ್ನು ಖಂಡಿಸಿ ಮಂಗಳೂರಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗಾಂಧಿ ಭಾವಚಿತ್ರಕ್ಕೆ ಗುಂಡು ಹೊಡೆದು ಕೃತ್ಯ ಎಸಗಿದ್ದಾರೆ. ರಾಷ್ಟ್ರಪಿತನ ಮೇಲೆ ಗೌರವ ಇಟ್ಟವರು ಇದನ್ನ ಖಂಡಿಸಬೇಕಾಗಿದೆ. ಸಂಘಪರಿವಾರದವರು ಗಾಂಧಿಗೆ ಅವಮಾನ ಮಾಡಿದ್ದಾರೆ ಅಂತಾ ಮಾಜಿ ಸಚಿವ ರಮಾನಾಥ್ ರೈ ಆರೋಪಿಸಿದ್ರು. ಈ ವೇಳೆ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Related posts

Leave a Reply