Header Ads
Header Ads
Breaking News

ಹಿಂದೂ ಸಂಘಟನೆಗಳ ಮೇಲೆ ಸಂಪ್ಯ ಪೊಲೀಸರಿಂದ ದೌರ್ಜನ್ಯದ ಆರೋಪ ದೌರ್ಜನ್ಯವನ್ನು ಖಂಡಿಸಿ ಪುತ್ತೂರಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

ಹಿಂದೂ ಮುಖಂಡರ ಹಾಗೂ ಸಂಘಟನೆಗಳ ಮೇಲೆ ಪುತ್ತೂರು ಸಂಪ್ಯ ಪೋಲೀಸರು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪುತ್ತೂರಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು .ಪ್ರತಿಭಟಯನ್ನು ಉದ್ಧೇಶಿಸಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್ ಮಾತನಾಡಿ, ಎಲ್ಲಾ ಕಡೆಯಿಂದಲೂ ಹಿಂದೂ ಸಮಾಜದ ಮೇಲೆ ದೌರ್ಜನ್ಯಗಳಾಗುತ್ತಿದೆ.

ಕೆಲವೊಂದು ಸಂಘಟನೆಗಳು ನಡೆಸುವ ದೇಶದ್ರೋಹಿ ಕೆಲಸಗಳನ್ನು ಹುರಿದುಂಬಿಸುವ ಕೆಲಸವನ್ನು ಕರ್ನಾಟಕದ ಸಿದ್ಧರಾಮಯ್ಯ ಸರಕಾರ ಮಾಡುತ್ತಿದ್ದು, ಇದಕ್ಕೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೂಡಾ ಸಾಥ್ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Related posts