Header Ads
Header Ads
Header Ads
Breaking News

’ಹಿಗ್ಗು’ವ ಸರಕಾರಿ ಶಾಲೆ ’ತೆಗ್ಗು’ ಕುಂಚದ ವರ್ಣದಲ್ಲಿ ಅರಳಿದ ಪರ್ಣ

 

ಮಕ್ಕಳ ಬದುಕಿನಲ್ಲಿ ಪರಿಸರದ ರಂಗು ತುಂಬುವ ಕೆಲಸ ಪುತ್ತೂರಿನ ತೆಗ್ಗು ಸರಕಾರಿ ಶಾಲೆಯಲ್ಲಿ ನಡೆಯಿತು. ೩ ದಿನಗಳ ಕಾಲ ನಡೆದ ಈ ಬಣ್ಣ ದ ಕಾರ್ಯಕ್ರಮದಲ್ಲಿ ೪೦ ಚಿತ್ರಗಳನ್ನು ನುರಿತ ಚಿತ್ರ ಕಲಾವಿದರು ತಯಾರಿಸಿದರು. ಕಾಡು, ಪರಿಸರ, ಪಕ್ಷಿ ,ರೈತ ಹೀಗೆ ಪ್ರತಿಯೊಂದು ಕಲಾಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ರೆಡಿಯಾಗಿ ನೋಡುಗರನ್ನು ಸೆಳೆಯಿತು.

ಪುತ್ತೂರು ತಾಲೂಕಿನ ತೆಗ್ಗು ಸರ್ಕಾರಿ ಶಾಲೆಯಲ್ಲಿ ಇವತ್ತು ನುರಿತು ಚಿತ್ರ ಕಲಾವಿದರು ತಯಾರಿಸಿದ ಕಲಾ ಚಿತ್ರಗಳು ಎಲ್ಲಾಗಮನ ಸೆಳೆಯಿತು.
ಮಾಧ್ಯಮ ಕಲೆ. ಕಲೆಯ ಮೂಲಕ ಇಡೀ ಜಿಲ್ಲೆಗೆ ಪರಿಸರ ಸಂರಕ್ಷಣೆಯ ಸಂದೇಶ ನೀಡಿತ್ತು. ಶಿಕ್ಷಕರು ಹಾಗೂ ಶಾಲಾ ಎಸ್‌ಡಿಎಂಸಿ ಮನಸ್ಸು ಮಾಡಿದರೆ ಯಾವುದೇ ಶಾಲೆಯನ್ನು ಅತ್ಯಂತ ಸಕ್ರೀಯ ಶಾಲೆಯನ್ನಾಗಿಸಬಹುದು ಎಂಬುವುದಕ್ಕೆ ಸಾಕ್ಷಿಯಾಗಿ ನಿಂತ ಶಾಲೆ ತೆಗ್ಗು. ಕೆಲವು ವರ್ಷಗಳ ಹಿಂದೆ ಈ ಸರಕಾರಿ ತೆಗ್ಗು ಶಾಲೆ ಅತ್ಯಂತ ದುರವಸ್ಥೆಯಲ್ಲಿತ್ತು. ಇಲ್ಲಿನ ಕಟ್ಟಡಗಳು ನಾದುರಸ್ಥಿಯಲ್ಲಿದ್ದು ಇನ್ನೇನು ಶಾಲೆಯನ್ನೇ ಮುಚ್ಚಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಇಲ್ಲಿಗೆ ಭಾರತಿ ಸ್ವರಮನೆ ಮುಖ್ಯಗುರುಗಳಾಗಿ ಬಂದರು. ಇವರೊಂದಿಗೆ ಇವರ ಪತಿ ರಮೇಶ್ ಉಳಯರನ್ನು ಈ ಶಾಲೆಗೆ ನಿಯೋಜನೆಗೊಳಿಸಲಾಯಿತು. ಅಲ್ಲಿಂದ ಶಾಲೆಯ ಚಿತ್ರಣವೇ ಬದಲಾಯಿತು. ಶಾಲಾ ಚಿನ್ನದ ಹಬ್ಬದ ನೆನಪು ಇಟ್ಟುಕೊಂಡು ಶಾಲೆಯ ಸುತ್ತ ಸುಮಾರು ೨ ಎಕರೆ ಸ್ಥಳ ಪಾಳುಬಿದ್ದಿರುವುದನ್ನು ಗಮನಿಸಿದ ಇವರು ಮೊದಲಿಗೆ ಇಲ್ಲಿ ನಡೆಸಿದ್ದು ಕೃಷಿ ಕ್ರಾಂತಿ. ಈ ಖಾಲಿ ಜಾಗದಲ್ಲಿ ಸುಮಾರು ೪೦೦ ಅಡಕೆ ಗಿಡಗಳನ್ನು ನೆಟ್ಟು ಶಾಲೆಗೆ ಶಾಶ್ವತ ಆಸ್ತಿಯೊಂದನ್ನು ನಿರ್ಮಾಣ ಮಾಡಿದರು. ನಂತರ ಇದೀಗ ಪರ್ಣದ ಉಳಿವಿಗೆ ವರ್ಣದ ಕಾಣಿಕೆ ಎಂಬ ವಿಶೇಷ ಕಾರ್ಯಾಗಾರವೊಂದನ್ನು ಇಲ್ಲಿ ನಡೆಸಲಾಗಿದೆ.

ಇಡೀ ಪರಿಸರವನ್ನು ಕಾವ್ಯಾತ್ಮಕಗೊಳಿಸುವ ಚಿತ್ರಗಳನ್ನು ನಿರ್ಮಿಸಿದ ಈ ೪೦ ಕಲಾ ಶಿಕ್ಷಕರು ಸರಕಾರಿ ಶಾಲೆಯೊಂದಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಪ್ರಕೃತಿಯ ಸಣ್ಣದಾದ ಎಲೆಯೊಂದರಿಂದ ಹಿಡಿದು ಅಲ್ಲಿನ ಮರ ಗಿಡ ಪ್ರಾಣಿ ಪಕ್ಷಿ ಹೀಗೆ ಪ್ರತಿಯೊಂದು ಅಂಶಗಳನ್ನು ಕುಂಚದ ಮೂಲಕ ಸೆರೆ ಹಿಡಿದ ಕಲಾಶಿಕ್ಷಕರು ಶಾಲೆಯ ಕೀರ್ತಿಯನ್ನು ಹೆಚ್ಚಿಸಲು ಕಾರಣಕರ್ತರಾದರು.ಅಧ್ಯಕ್ಷ ಶುಭಪ್ರಕಾಶ್ ಎರೆಬೈಲು ಮೊದಲಾದವರು ಸಾಥ್ ನೀಡುತ್ತಿದ್ದಾರೆ.
ಸರಕಾರಿ ಶಾಲೆಯೊಂದನ್ನು ಉನ್ನತ ಮಟ್ಟಕ್ಕೆ ಒಯ್ಯಲು ಪ್ರಯತ್ನ ಪಡುತ್ತಿರುವ ಭಾರತಿ ಸ್ವರಮನೆ ಹಾಗೂ ರಮೇಶ್ ಉಳಯ ’ದಂಪತಿ’ ಶಿಕ್ಷಕರ ಕಾರ್ಯ ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ.
ವರದಿ; ಅನೀಶ್ ಕುಮಾರ್ ಪುತ್ತೂರು

Related posts

Leave a Reply