Breaking News

ಹಿಜಬ್ ಧರಿಸಿದ ಮಕಿಳೆಯನ್ನು ಹೊರಹಾಕಿದ ಬ್ಯಾಂಕು, ಅಮೆರಿಕದಲ್ಲಿ ಮತ್ತೊಂದು ಜನಾಂಗೀಯ ತಾರತಮ್ಯ

ತಲೆಗವುಸು ಧರಿಸಿದ್ದ ಅಮೆರಿಕದ ಮುಸ್ಲಿಂ ಮಹಿಳೆಯೊಬ್ಬರನ್ನು ಬ್ಯಾಂಕ್ ಸಿಬ್ಬಂದಿ ಹೊರಕ್ಕೆ ಕಳುಹಿಸಿದ ಘಟನೆ ಯು‌ಎಸ್‌ಎ ಇಲ್ಲಿ ನಡೆದಿದೆ. ತಲೆಗವುಸನ್ನು ತೆಗೆಯದೇ ಇದ್ದರೆ ಪೊಲೀಸರನ್ನು ಕರೆಯಲಾಗುವುದು ಎಂದೂ ಸಿಬ್ಬಂದಿ ಮಹಿಳೆಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಜಮೇಲಾ ಮೊಹಮದ್ ಎಂಬುವವರು ಕಾರಿನ ಕಂತು ಪಾವತಿ ಮಾಡುವ ಸಲುವಾಗಿ ಸೌಂಡ್ ಕ್ರೆಡಿಟ್ ಯೂನಿಯನ್ನ ವಾಷಿಂಗ್ಟನ್ ಶಾಖೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಬ್ಯಾಂಕ್ನೊಳಗೆ ಟೋಪಿ, ತಲೆಗವುಸು, ತಂಪು ಕನ್ನಡಕ ಹಾಕಿಕೊಂಡು ಬರಲು ಅನುಮತಿ ಇಲ್ಲ ಎಂಬ ಸೂಚನೆಯನ್ನು ಹಾಕಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಜಮೇಲಾ, ಸೌಂಡ್ ಕ್ರೆಡಿಟ್ ಯೂನಿಯನ್ ಬ್ಯಾಂಕ್ ಸದಸ್ಯತ್ವ ಹೊಂದಿದ್ದಾರೆ.
ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿರುವ ಅವರು, ಅದರ ವಿಡಿಯೊವನ್ನು ತಮ್ಮ ಫೇಸ್ಬುಕ್ನಲ್ಲಿ ಹಾಕಿದ್ದಾರೆ. ನನ್ನ ವಿರುದ್ಧ ತಾರತಮ್ಯ ಎಸಗಲಾಗಿದೆ. ಈ ರೀತಿ ಅವಮಾನವಾಗುವುದನ್ನು ನಾನು ಬಯಸುವುದಿಲ್ಲ. ಯಾರನ್ನೂ ಈ ರೀತಿ ನಡೆಸಿಕೊಳ್ಳಬಾರದು. ಇದು ನನ್ನ ವಿನಂತಿ ಎಂದು ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಮುಂದೆಯೇ ಇಬ್ಬರು ಪುರುಷರು ಟೋಪಿ ಹಾಕಿಕೊಂಡು ಬಂದಿದ್ದರು. ಅವರನ್ನು ಯಾರೂ ಪ್ರಶ್ನಿಸಲಿಲ್ಲ. ಆದರೆ, ನನ್ನನ್ನು ಅವಮಾನಿಸಿದ್ದು ಏಕೆ? ಎಂದು ಜಮೇಲಾ ಪ್ರಶ್ನಿಸಿದ್ದಾರೆ.

Related posts

Leave a Reply