Header Ads
Breaking News

ಹಿದಾಯತ್ ನಗರ ಎಂಎಸ್‌ಎಫ್ ಸಂಘಟನೆಯಿಂದ ಬಿಎ ಅರೇಬಿಕ್ ವಿಭಾಗದಲ್ಲಿ ರ್‍ಯಾಂಕ್ ಪಡೆದವರಿಗೆ ಸನ್ಮಾನ

ಮಂಜೇಶ್ವರ: ಕಣ್ಣೂರು ವಿಶ್ವ ವಿದ್ಯಾಲಯದಲ್ಲಿ ಬಿಎ ಅರೇಬಿಕ್ ವಿಭಾಗದಲ್ಲಿ ಒಂದನೇ ರಾಂಕ್ ಪಡೆದ ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಹಾಗು ಉಪ್ಪಳ ಹಿದಾಯತ್ ನಗರದ ಸಯ್ಯದ್ ಬಾದುಷಾ ತಂಗಳ್ – ಮೈಮುನಾ ದಂಪತಿಗಳ ಪುತ್ರಿ ಅನ್ನತ್ ಬೀವಿಯನ್ನು ಹಿದಾಯತ್ ನಗರ್ ಎಂಎಸ್‌ಎಫ್ ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ವಲಯ ಕಾರ್ಯದರ್ಶಿ ಗೋಲ್ಡನ್ ರಹ್ಮಾನ್ ವಿದ್ಯಾರ್ಥಿನಿಗೆ ಗೌರವ ಪದಕವನ್ನು ನೀಡಿ ಸಿಹಿ ತಿಂಡಿ ವಿತರಿಸಿದರು. ಈ ಸಂದರ್ಭ ನೇತಾರರಾದ ಕೆ. ಮೂಸಾ, ಮುಫಾಸ್ ಕೋಟಾ, ಆಫ್ಸಲ್ ಬೇಕೂರು, ಸಿದ್ದೀಖ್ ರಶೀದ್, ಇಬ್ರಾಹಿಂ ಹನೀಫಿ, ಮಹರೂಫ್ ಮೊದಲಾದವರು ಉಪಸ್ಥರಿದ್ದರು

Related posts

Leave a Reply

Your email address will not be published. Required fields are marked *