Breaking News

ಹಿರಿಯಡಕ ಸೇತುವೆಯ ತಳ ಭಾಗ ಶಿಥಿಲ ದುರಸ್ಥಿ ಕಾರ್ಯ, ವಿ4 ನ್ಯೂಸ್ ಸುದ್ದಿ ಫಲಿತ

68 ವರ್ಷಗಳ ಹಳೇ ಸೇತುವೆಯಾದ ಹಿರಿಯಡಕ ಸೇತುವೆಯ ತಳ ಭಾಗ ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿತ್ತು.
ಈ ಬಗ್ಗೆ ಸಮಾಜ ಸೇವಕರಾದ ಗಣೇಶ್ ರಾಜ್ ಸರಳೇಬೆಟ್ಟು ಸೇರಿದಂತೆ ಅಲ್ಲಿನ ನಾಗರೀಕರು ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಬಗ್ಗೆ ವಿ೪ ನ್ಯೂಸ್ ವರದಿ ಕೂಡಾ ಬಿತ್ತರಿಸಿತ್ತು. ಇದೀಗ ಎಚ್ಚೆತ್ತುಕೊಂಡೊರುವ ಜಿಲ್ಲಾಡಳಿತ ಸೇತುವೆಯ ತಳ ಭಾಗದಲ್ಲಿ ಉಂಟಾಗಿರುವ ಹಾನಿಯ ದುರಸ್ಥಿ ಕಾರ್ಯ ನಡೆಸುತ್ತಿದೆ.
ಶಿವಮೊಗ್ಗ ಉಡುಪಿ ಸಂಪರ್ಕಿಸುವ ಏಕೈಕ ಸೇತುವೆ ಇದಾಗಿದ್ದು ದಿನಾಲೂ ಸಾವಿರಾರು ವಾಹನಗಳು, ಘನ ವಾಹನಗಳ ಓಡಾಟದಿಂದ ಸೇತುವೆಯ ತಳ ಭಾಗದಲ್ಲಿನ ಕಲ್ಲುಗಳು, ಮತ್ತು ಕಾಂಕ್ರೀಟ್ ನೀರು ಪಾಲಾಗಿತ್ತು.

Related posts

Leave a Reply