Header Ads
Breaking News

ಹಿರಿಯ ಕಾಂಗ್ರೆಸ್ ನಾಯಕ ಬರಂಗರೆ ಸದಾನಂದ ಪೂಂಜ ನಿಧನ

ಬಂಟ್ವಾಳ: ಜಿ.ಪಂ. ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ, ಸಜೀಪ ಮೂಡ ಗ್ರಾಮದ ಸಮಗ್ರ ಅಭಿವೃದ್ಧಿಯ ರುವಾರಿ ಬರಂಗರೆ ಸದಾನಂದ ಪೂಂಜ (80) ಅಸೌಖ್ಯದಿಂದ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಸಜೀಪ ಮಾಗಣೆಯ ಆಡಳಿತದಾರರಾಗಿದ್ದ ಅವರು ಸಜೀಪ ಮೂಡ ಗ್ರಾಮ ಪಂಚಾಯತಿಯ ಮಂಡಲ ಪ್ರಧಾನರಾಗಿ ಹಾಗೂ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದರು. ಸುಭಾಶ್ ಯುವಕ ಮಂಡಲ ಹಾಗೂ ಶಾರದೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷರಾಗಿದ್ದರು. ಸಜೀಪ ಮೂಡದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿದ್ದ ಅವರು ಈಶ್ವರ ಮಂಗಲ ದೇವಸ್ಥಾನದ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.ಸಜೀಪಮೂಡದ ಅವರ ಮನೆ ಶಾಂತಿನಿಕೇತನದಲ್ಲಿ ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ.

Related posts

Leave a Reply

Your email address will not be published. Required fields are marked *