Header Ads
Header Ads
Header Ads
Breaking News

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಹತ್ಯೆ ಖಂಡಿಸಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ಕೃತ್ಯದಲ್ಲಿ ಭಾಗಿಯಾದರವನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಿ


ಕುಂದಾಪುರ: ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಬೈಂದೂರು ಶಾಸಕ ಮತ್ತು ಕೆ‌ಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಖಂಡಿಸಿದ್ದಾರೆ. ಅವರ ಹತ್ಯೆಯನ್ನ ನಡೆಸಿರುವುದು ಖಂಡನೀಯ. ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅಂತಹವರನ್ನ ಬಂಧಿಸಿ ಕಠಿಣ ಕ್ರಮವನ್ನ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನೂ ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ಘಟನೆಯನ್ನು ಖಂಡಿಸಿದ್ದು. ಅವರ ವಿಚಾರಧಾರೆಗಳು ಕೆಲವರಿಗೆ ಇಷ್ಟವಾಗಿದೆ ಇನ್ನೂ ಕೆಲವರಿಗೆ ಅಜಿರ್ಣವಾಗಿದೆ. ಆದರೆ ಕಾನೂನನ್ನು ಕೈಗೆತ್ತಿಕೊಂಡು ಕೃತ್ಯ ನಡೆಸಿರುವುದು ನಿಜಕ್ಕೂ ಖಂಡನೀಯ ಸರ್ಕಾರ ಕೂಡಲೇ ಆರೋಪಿಗಳನ್ನ ಬಂಧಿಸಬೇಕು. ವಿಚಾರವಾಧಿಗಳ ಮತ್ತು ಸಾಹಿತಿಗಳ ಹತ್ಯೆ ನಡೆದಿರುವುದು ಇದು ರಾಜ್ಯದಲ್ಲಿ ಎರಡನೇ ಬಾರಿ. ಆದ್ದರಿಂದ ಸರ್ಕಾರ ಇನ್ನಾದರೂ ವಿಚಾರವಾದಿಗಳ ಮತ್ತು ಸಾಹಿತಿಗಳ ಪತ್ರಕರ್ತರ ರಕ್ಷಣೆಗೆ ಗಮನನೀಡಬೇಕೆಂದು ಆಗ್ರಹಿಸಿದರು.

Related posts

Leave a Reply