Header Ads
Header Ads
Breaking News

ಹಿರಿಯ ಪತ್ರಕರ್ತ ಮಲಾರು ಜಯರಾಮ ರೈಗೆ ಸನ್ಮಾನ

ಮಂಜೇಶ್ವರ: ಕನ್ನಡ ಪತ್ರಿಕೋದ್ಯಮ ಇಂದು ವಿಸ್ಕೃತವಾಗಿ ಬೆಳೆದಿದೆ. ಆಧುನಿಕ ತಂತ್ರಜ್ಞಾನ ಯುಗದ ಪೈಪೋಟಿಯ ಮಧ್ಯೆ ತನ್ನದೇ ಮಹತ್ವಗಳಿಂದ ಪತ್ರಿಕೆಗಳು ಸಾಮಾಜಿಕ, ಸಾಂಸ್ಕ್ರತಿಕ, ರಾಜಕೀಯ ಹಾಗೂ ವ್ಯಾವಹಾರಿಕ ಅರಿವನ್ನು ಪಸರಿಸುವಲ್ಲಿ ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಿರುವುದರ ಹಿಂದೆ ಕ್ರಿಯಾತ್ಮಕ ಪತ್ರಕರ್ತರ ಪಾತ್ರ ಮಹತ್ತರವಾಗಿದೆ ಎಂದು ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಅಭಿಪ್ರಾಯ ವ್ಯಕ್ತಪಡಿಸಿದರು.ಕಾಸರಗೋಡಿನ ಗಡಿನಾಡು ಸಾಹಿತ್ಯ- ಸಾಂಸ್ಕ್ರತಿಕ ಅಕಾಡೆಮಿ ನೇತೃತ್ವದಲ್ಲಿ ಶಿರಿಯಾದಲ್ಲಿರುವ ಅವರ ಸ್ವಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೌರವಿಸಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಧನಾತ್ಮಕ ಚಿಂತನೆಗಳನ್ನು ಪಸರಿಸುವ ಕಾರ್ಯಗಳು ಪತ್ರಿಕೆಗಳಿಂದಾಗಬೇಕು. ಮನಸ್ಸನ್ನು ಅರಳಿಸುವ ವರ್ತಮಾನಗಳು ಇಂದಿನ ಸಮಾಜಕ್ಕೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪತ್ರಿಕೆಗಳು, ವರದಿಗಾರರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದಾಗ ಸುಖೀ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು. ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಕಾಡೆಮಿ ಗೌರವಾಧ್ಯಕ್ಷ ಪ್ರೊ. ಎ.ಶ್ರೀನಾಥ್, ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖೀಲೇಶ್ ವಸಂತ ಬಾರಡ್ಕ ಮಲಾರು ಜಯರಾಮ ರೈಗಳ ಧರ್ಮಪತ್ನಿ ಗೀತಾ ಜೆ. ರೈ, ಪತ್ರಕರ್ತೆ ಸಾಯಿಭದ್ರಾ ರೈ, ಪುರುಷೋತ್ತಮ ಭಟ್ ಕೆ. ,ಧನ್ಯಶ್ರೀ, ಅಖಿಲೇಶ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply