Header Ads
Header Ads
Breaking News

ಹಿರಿಯ ಪತ್ರಕರ್ತ ಸುಕೇಶ್ ಕುಮಾರ್‌ಗೆ 2018ನೇ ಸಾಲಿನ ಪ್ರತಿಷ್ಠಿತ ಮಾದ್ಯಮ ಅಕಾಡೆಮಿ ಪ್ರಶಸ್ತಿ

ಮಂಗಳೂರು : ಎರಡೂವರೆ ದಶಕಗಳ ಕಾಲ ನಾಡಿನ ಅಗ್ರ ಪಂಕ್ತಿಯ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಮಂಗಳೂರಿನ ಹಿರಿಯ ಪತ್ರಕರ್ತ ಸುಕೇಶ್ ಕುಮಾರ್ ಶೆಟ್ಟಿ ಅವರಿಗೆ 2018ನೇ ಸಾಲಿನ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ.
1996ರ ಫೆಬ್ರವರಿಯಲ್ಲಿ ಮಂಗಳೂರಿನ ಕರಾವಳಿ ಅಲೆ ಮೂಲಕ ಪತ್ರಕರ್ತರಾಗಿ ಮಾಧ್ಯಮ ಕ್ಷೇತ್ರ ಪ್ರವೇಶಿಸಿದ ಸುಕೇಶ್, 1997ರಿಂದ ಜನವಾಹಿನಿಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಬಳಿಕ 2000ದಲ್ಲಿ ಈಟಿವಿ ಕನ್ನಡದ ಉಪ ಸಂಪಾದಕರಾಗಿ ಹೈದರಾಬಾದನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಾರ್ಯ ನಿರ್ವಹಿಸಿದರು. ಈಟಿವಿ ವರದಿಗಾರರಾಗಿ ಹಾಸನದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಮತ್ತೆ ಹೈದರಾಬಾದ್‌ಗೆ ಬುಲೆಟಿನ್ ಪ್ರೊಡ್ಯೂಸರ್ ಆಗಿ, 2006ರಲ್ಲಿ ಟಿವಿ9 ಕನ್ನಡ ಚಾನೆಲ್‌ನ ಆರಂಭಿಕ ಸಂಪಾದಕೀಯ ತಂಡದ ಪ್ರಮುಖರಾಗಿ ಸೇವೆ ಸಲ್ಲಿಸಿದರು.
2007ರಲ್ಲಿ ಸುವರ್ಣ ನ್ಯೂಸ್‌ನ ಮಂಗಳೂರಿನ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಸತತ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುಕೇಶ್, ಪ್ರಸ್ತುತ ಎರಡು ವರ್ಷಗಳಿಂದ ಕಸ್ತೂರಿ ನ್ಯುಸ್ ಸುದ್ದಿ ವಾಹಿನಿಯಲ್ಲಿ ಮಂಗಳೂರನ್ನು ರಾಜ್ಯದಲ್ಲಿ ಪ್ರತಿನಿಧಿಸುತ್ತಿದ್ಧಾರೆ.
ದೃಶ್ಯ ಮಾದ್ಯಮದಲ್ಲಿ ನಾಡಿನ ಪ್ರಮುಖರಾಗಿರುವ ರವಿ ಕುಮಾರ್, ಹಮೀದ್ ಪಾಳ್ಯ, ಜಯಪ್ರಕಾಶ್ ಶೆಟ್ಟಿ, ರಂಗನಾಥ್ ಭಾರದ್ವಾಜ್, ರಾಧಿಕಾ ರಾಣಿ, ಗೌರೀಶ್ ಅಕ್ಕಿ ಸೇರಿದಂತೆ ಬಹುತೇಕ ಎಲ್ಲರ ಜೊತೆ ದೃಶ್ಯ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಖ್ಯಾತಿ ಸುಕೇಶ್ ಕುಮಾರ್ ಶೆಟ್ಟಿ ಅವರದ್ದು.
ಈಗ ರಾಜ್ಯದ ಪ್ರಮುಖ ಚಾನೆಲ್‌ಗಳಲ್ಲಿ ಸೇವೆ ಸಲ್ಲಿಸಿದ ಎಲ್ಲ ಮುಂಚೂಣಿ ಪತ್ರಕರ್ತರ ಜೊತೆ ನಿಕಟ ಸಂಪರ್ಕ ಇರುವುದು ಇವರ ಹೆಚ್ಚುಗಾರಿಕೆ.
“ಒಂದು ಪತ್ರಿಕೆ, ಮೂರು ಚಾನೆಲ್”
90ರ ದಶಕದಲ್ಲಿ ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಜನವಾಹಿನಿ ಪತ್ರಿಕೆಯ ಆರಂಭದ ಸಂಪಾದಕೀಯ ತಂಡದಲ್ಲಿ ಅವಿಭಾಜ್ಯ ಅಂಗವಾಗಿದ್ದ ಸುಕೇಶ್ ಕುಮಾರ್, ನಾಡಿನ ಪ್ರಮುಖ ಮೂರು ಚಾನೆಲ್‌ಗಳ ಆರಂಭಿಕ ಸಂಪಾದಕೀಯ ತಂಡದ ಮುಖ್ಯ ಸದಸ್ಯರಾಗಿದ್ದರು ಎಂಬುದು ಗಮನಾರ್ಹ. ಈಟಿವಿ ಕನ್ನಡ ಸುದ್ದಿ ವಾಹಿನಿ, ಟಿವಿ9 ಕನ್ನಡ ಮತ್ತು ಸುವರ್ಣ ನ್ಯೂಸ್‌ ಚಾನೆಲ್‌ಗಳ ಆರಂಭದಲ್ಲಿ ಉತ್ತಮ ತಂಡವನ್ನು ಮುನ್ನಡೆಸುವ ಸಂಪಾಕೀಯ ತಂಡದಲ್ಲಿ ಒಬ್ಬರಾಗಿದ್ದವರು ಮಂಗಳೂರಿನ ಸುಕೇಶ್ ಕುಮಾರ್ ಶೆಟ್ಟಿ.
ಪುತ್ತೂರಿನ ನಂಟು
ಮಂಗಳೂರಿನಲ್ಲೇ ಹುಟ್ಟಿ ಬೆಳೆದು ಪತ್ರಿಕೋದ್ಯಮದಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಸುಕೇಶ್ ಅವರಿಗೆ ಪುತ್ತೂರಿನ ನಂಟೂ ಇದೆ. ಅವರ ಬಾಳಸಂಗಾತಿಯಾಗಿರುವ ಚಿತ್ರಲೇಖಾ ಶೆಟ್ಟಿ ಅವರು ಪುತ್ತೂರಿನವರು. ಬನ್ನೂರಿನ ಕೃಷ್ಣನಗರದ ಶೀನಪ್ಪ ರೈ ಮತ್ತು ಶೀಲಾವತಿ ದಂಪತಿಯ ಕಿರಿಯ ಪುತ್ರಿಯಾಗಿರುವ ಚಿತ್ರಲೇಖಾ ಅವರು ಪ್ರಸ್ತುತ ಮಂಗಳೂರಿನ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
“ಕಾನೂನು ಸೇವೆಯಲ್ಲೂ ಒಂದು ಕೈ”
ಜನವಾಹಿನಿಯಲ್ಲಿ ಇರುವಾಗಲೇ ಎಲ್‌ಎಲ್‌ಬಿ ಪದವಿಯನ್ನು ಗಳಿಸಿರುವ ಸುಕೇಶ್, ಕಳೆದ ಒಂದೂವರೆ ವರ್ಷಗಳಿಂದ ಕಾನೂನು ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಮಂಗಳೂರು, ಉಡುಪಿ ಮತ್ತು ಬಂಟ್ವಾಳಗಳಲ್ಲಿ ತಮ್ಮ ಸಹೋದ್ಯೋಗಿ ವಕೀಲ ಮಿತ್ರರ ಜೊತೆಗೂಡಿ ಕಾನೂನು ಸೇವೆ ಸಲ್ಲಿಸುತ್ತಿದ್ದಾರೆ.

Related posts

Leave a Reply