Header Ads
Header Ads
Breaking News

ಹಿರಿಯ ಮುತ್ಸದ್ಧಿ ಬಿ.ಎ. ಮೊಹಿದಿನ್ ಅಂತ್ಯ ಸಂಸ್ಕಾರ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ಮುತ್ಸದ್ದಿ ಬಜ್ಪೆ ಅಬ್ದುಲ್ ಖಾದರ್ ಮೊಹಿದಿನ್ ಅವರ ಅಂತ್ಯ ಸಂಸ್ಕಾರವು ಮಂಗಳವಾರ ರಾತ್ರಿ ಬಜ್ಪೆ ಈದ್ಗಾ ಜುಮಾ ಮಸ್ಜಿದ್ ಬಳಿ ನಡೆಯಿತು.ಅದಕ್ಕೂ ಮೊದಲು ಸಕಲ ಸರಕಾರಿ ಗೌರವ ಸಲ್ಲಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸರಕಾರಿ ಗೌರವ ನೆರವೇರಿಸಿಕೊಟ್ಟರು.ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ಮೊಹಿದಿನ್ ಅವರ ಮೃತದೇಹವನ್ನು ವಿಶೇಷ ಎಸ್ಕಾರ್ಟ್ ವಾಹನದ ಬೆಂಗಾವಲಿನೊಂದಿಗೆ ಮಂಗಳೂರಿಗೆ ತರಲಾಯಿತು. ಈ ಸಂದರ್ಭ ಕುಟುಂಬ ಸದಸ್ಯರು ಹಾಗೂ ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಆಪ್ತರು ಪಾಲ್ಗೊಂಡಿದ್ದರು.
ಇನ್ನೂ ಅಂತಿಮ ದರ್ಶನದ ವೇಳೆ ರಾಜ್ಯ ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್, ವಸತಿ ಸಚಿವ ಯು.ಟಿ ಖಾದರ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ , ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಆರ್ ಸುರೇಶ, ಮಾಜಿ ಸಚಿವ ರಮಾನಾಥ ರೈ, ಆಭಯಚಂದ್ರ ಜೈನ್ ಸಹಿತ ಗಣ್ಯಾತಿ ಗಣ್ಯರು ಅಂತಿಮ ನಮನದಲ್ಲಿ ಪಾಲ್ಗೊಂಡಿದ್ದರು.

Related posts

Leave a Reply