
ಬಾನಂಗಳದ ಧ್ರುವತಾರೆ.. ಧರ್ಮಸ್ಥಳ ಮೇಳದ ಯಕ್ಷಗಾನ ಮೇಳದ ಹಿರಿಯ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಂಡುವೇಷದ ಗಂಡುಗಲಿ ದಿಗಿಣ ವೀರ ಡಾ.ಶ್ರೀಧರ ಭಂಡಾರಿ ಪುತ್ತೂರು ಹರಿಪಾದ ಸೇರಿದ್ದಾರೆ.
ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶ್ರನ್ನು ಅಗಲಿದ್ದಾರೆ.ಯಕ್ಷಗಾನ ಕ್ಷೇತ್ರದಲ್ಲಿ ಅಭಿಮನ್ಯು, ಬಬ್ರುವಾಹನ, ಕೃಷ್ಣ, ಭಾರ್ಗವ ಹೀಗೆ ಹಲವು ಪಾತ್ರಗಳಿಗೆ ಮಾರ್ಗದರ್ಶಕ ರೂಪವಾಗಿದ್ದ ಕುರಿಯ ವಿಠ್ಠಲ ಶಾಸ್ತ್ರಿಗಳು, ಕೃಷನ್ ಬಾಬು ಹೀಗೆ ಹಲವು ಹಿರಿಯರ ಅಭಿವ್ಯಕ್ತಿಯನ್ನು ಅಳವಡಿಸಿಕೊಂಡು ಬೆಳೆಸಿದವರಲ್ಲಿ ಶ್ರೀಧರ ಭಂಡಾರಿಯವರು ಪ್ರಮುಖರು. ಇವರಿಗೆ ಶಿವರಾಮ ಕಾರಂತ ಪ್ರಶಸ್ತಿಯೂ ಲಭಿಸಿದೆ. ಜೊತೆಗೆ ಉಡುಪಿ ಪೇಜಾವರ ಶ್ರೀ, ಎಡನೀರು ಸ್ವಾಮಿಗಳು, ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆಯವರಿಂದಲೂ ಗೌರವ-ಪ್ರಶಸ್ತಿಗಳು ಸಂದಿವೆ.