Header Ads
Header Ads
Header Ads
Breaking News

ಹಿರಿಯ ರಂಗಕರ್ಮಿ ಎಸ್.ಟಿ. ಸುವರ್ಣ (88)ನಿಧನ ಇಂದು ಪೂರ್ವಾಹ್ನ 11 ಗಂಟೆಗೆ ಚಿತ್ರಾಪುರದ ಮನೆಯಲ್ಲಿ ಮೃತ್ಯು

ಮಂಗಳೂರು: ಪಣಂಬೂರು ಬೀಚ್ ಟೂರಿಸಂ ಡೆವಲಪ್‌ಮೆಂಟ್ ಅಥಾರಿಟಿಯ ಸಿಇಓ ಯತೀಶ್ ಬೈಕಂಪಾಡಿಯವರ ತಂದೆ ಹಿರಿಯ ರಂಗಕರ್ಮಿ, ಎಸ್.ಟಿ. ಸುವರ್ಣ ಇಂದು ನಿಧನರಾದರು. ಇವರಿಗೆ 88 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಇದ್ದ ಎಸ್.ಟಿ.ಸುವರ್ಣರವರು ಇಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರಿನ ಕುಳಾಯಿ ಬಳಿಯ ಚಿತ್ರಾಪುರದಲ್ಲಿರುವ ಅವರ ಮನೆಯಲ್ಲಿ ಕೊನೆಯುಸಿರೆಳೆದರು.

       ಯುನಿಯನ್ ಬ್ಯಾಂಕ್‌ನ ಅಕಾರಿಯಾಗಿ ಮಂಗಳೂರಿನಲ್ಲಿ ನಿವೃತ್ತರಾಗಿದ್ದ ಎಸ್.ಟಿ.ಸುವರ್ಣರವರು ತಮ್ಮ ಹೆಚ್ಚಿನ ಸೇವಾ ಅವಯನ್ನು ಮುಂಬೈಯಲ್ಲಿಯೇ ಕಳೆದಿದ್ದರು. ಮುಂಬೈಯಲ್ಲಿರುವಾಗ ರಂಗ ಚಟುವಟಿಕೆಗಳಲ್ಲೂ ನಿರತರಾಗಿದ್ದ ಎಸ್.ಟಿ.ಸುವರ್ಣ ಹಲವು ನಾಟಕಗಳಲ್ಲಿ ನಟನೆ ಮಾಡಿದ್ದಾರೆ.ಮುಂಬೈಯ ಉದಯ ಕಲಾನಿಕೇತನದ ಸಂಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣ ಸಹಿತ ಹಲವು ಪ್ರಮುಖ ರಂಗ ನಿರ್ದೇಶಕರೊಂದಿಗೆ ನಾಟಕಗಳಲ್ಲಿ ಕೆಲಸ ಮಾಡಿದ ಅನುಭವ ಎಸ್.ಟಿ.ಸುವರ್ಣರವರದ್ದಾಗಿತ್ತು.

ಹಿರಿಯ ನಿರ್ದೇಶಕ ನಾಗಾರ್ಜುನ ನಿರ್ದೇಶನದ ಸಾಗರದೀಪ ಕನ್ನಡ ಚಿತ್ರದಲ್ಲೂ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದರು.ಮೃತರು ಯತೀಶ್ ಬೈಕಂಪಾಡಿ ಸಹಿತ ಮೂವರು ಪುತ್ರರನ್ನ.ಅಗಲಿದ್ದಾರೆ.ಎಸ್.ಟಿ.ಸುವರ್ಣರವರ ಅಂತ್ಯಕ್ರಿಯೆ ಅ.4ರಂದು ಪೂರ್ವಾಹ್ನ 11 ಗಂಟೆಗೆ ಚಿತ್ರಾಪುರದಲ್ಲಿ ನಡೆಯುತ್ತದೆ ಎಂದ ಪುತ್ರ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.

Related posts

Leave a Reply