Header Ads
Header Ads
Breaking News

ಹುಟ್ಟಿನಿಂದಲೇ ವಿಕಲಾಂಗ ಚೇತನ ಭಾಗ್ಯಶ್ರೀ ತಾಯಿಗೆ ರಿಕ್ಷಾ ಕೊಡುಗೆ

 ಹುಟ್ಟಿನಿಂದಲೇ ವಿಕಲಾಂಗ ಚೇತನ ಬಾಲಕಿಯಾದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ ಅತ್ಯಧಿಕ ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಯಾಳ ಗ್ರಾಮದ ಭಾಗ್ಯಶ್ರೀಯ ತಾಯಿ ರಾಜೀವಿ ಅವರಿಗೆ ಮಂಗಳೂರಿನ ಅಮೂಲ್ಯ ಸೇವಾ ಪ್ರತಿಷ್ಠಾನ ರಿಕ್ಷಾವೊಂದನ್ನು ಕೊಡುಗೆಯಾಗಿ ನೀಡಿದೆ.ತನ್ನಿಬ್ಬರು ಮಕ್ಕಳು ಹಾಗೂ ಪತಿ ಅಂಗವೈಕಲ್ಯತೆ ಹೊಂದಿದ್ದರೂ ಎದೆಗುಂದದೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅವಿರತ ಶ್ರಮ ಪಡುತ್ತಿರುವ ರಾಜೀವಿಯವರು ಭಾಗ್ಯಶ್ರೀಯನ್ನು ಎತ್ತಿಕೊಂಡೆ ಹತ್ತನೆ ವರೆಗೆ ಶಾಲೆ ಕಲಿಸಿದ್ದರು.

ಇದೀಗ ಕಾಲೇಜಿಗೆ ಹೋಗುತ್ತಿದ್ದರೂ ಅಲ್ಲಿಗೂ ಎತ್ತಿಕೊಂಡೆ ಹೋಗಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಪ್ರತಿ ತಿಂಗಳು ರಿಕ್ಷಾ ಬಾಡಿಗೆ ೬ ಸಾವಿರವನ್ನು ಪಾವತಿಸಬೇಕಾಗುತ್ತದೆ. ಇದೆಲ್ಲವನ್ನು ಮನಗಂಡ ಅಮೂಲ್ಯ ಸೇವಾ ಪ್ರತಿಷ್ಠಾನ ಈ ನೆರವನ್ನು ನೀಡಿದೆ. ಇದೀಗ ರಾಜೀವಿಯವರು ಮಕ್ಕಳಿಗಾಗಿ ರಿಕ್ಷಾ ಚಾಲನ ತರಬೇತಿಯನ್ನು ಪಡೆಯುತ್ತಿದ್ದಾರೆ. ಭಾಗ್ಯಶ್ರೀ ಸಾಧನೆಯ ಬಗ್ಗೆ ವಿ೪ ನ್ಯೂಸ್ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಯ ತುಣುಕು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಸಾಕಷ್ಟು ನೆರವು ಹರಿದು ಬಂದಿದೆ. ಅದರಂತೆ ಅಮೂಲ್ಯ ಪ್ರತಿಷ್ಠಾನ ರಿಕ್ಷಾದ ಕೊಡುಗೆಯನ್ನು ನೀಡಿದೆ.

Related posts

Leave a Reply