Breaking News

ಹುಣ್ಸೆಮಕ್ಕಿಯಲ್ಲಿ ಈಜಲು ಹೋದ ವ್ಯಕ್ತಿ ಸಾವು, ಅವಳಿ ಮಕ್ಕಳನ್ನು ಅನಾಥರಾಗಿಸಿ ಸತ್ತ ಜವಳಿ ವ್ಯಕ್ತಿ

ಈಜಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ಮಧ್ಯಾಹ್ನ ಬಿದ್ಕಲ್‌ಕಟ್ಟೆ ಸಮೀಪದ ಹುಣ್ಸೆಮಕ್ಕಿಯ ಬ್ರಹ್ಮನಗರದಲ್ಲಿ ನಡೆದಿದೆ.
ಬ್ರಹ್ಮನಗರ ನಿವಾಸಿ ೨೮ ವರ್ಷದ ರಾಮ ಘಟನೆಯಲ್ಲಿ ಮೃತಪಟ್ಟಿದ್ದು, ಮಧ್ಯಾಹ್ನ ಸ್ನೇಹಿತರಾದ ಮಂಜು ಮತ್ತು ಸಂತೋಷ್ ಜೊತೆ ಸ್ನಾನಕ್ಕೆ ಮನೆ ಸಮೀಪದ ಮದಗಕ್ಕೆ ತೆರಳಿದ್ದು ಈ ಸಂದರ್ಭ ರಾಮ ಈಜುತ್ತಾ ಮದಗದ ಮಧ್ಯಕ್ಕೆ ತೆರಳಿದ್ದಾನೆ. ಅಲ್ಲಿ ಮುಳುಗು ಹಾಕಿದ ಅವನು ಮೇಲಕ್ಕೆ ಬಾರಲೇ ಇಲ್ಲ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ದೂರು ನೀಡಿದ್ದಾರೆ. ಅನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಮೃತ ದೇಹವನ್ನು ಎತ್ತುವ ಪ್ರಯತ್ನ ಮಾಡಿದರೂ ಆಳವಿದ್ದ ಕಾರಣ ಎತ್ತಲು ಸಾಧ್ಯವಾಗಿಲ್ಲ. ತುರ್ತು ಪರಿಸ್ಥಿತಿ ಸಂದರ್ಭ ರಕ್ಷಣೆ ಅಗ್ನಿ ಶಾಮಕ ದಳದಲ್ಲಿ ದೋಣಿ ವ್ಯವಸ್ಥೆ ಇಲ್ಲ. ಇತ್ತೀಚಿಗೆ ಹಲವು ಪ್ರಕರಣಗಳು ನಡೆದಿದ್ದರೂ ಇನ್ನೂ ಅಗ್ನಿಶಾಮಕ ಇಲಾಖೆ ಎಚ್ಚೆತ್ತುಕೊಂಡಿಲ್ಲ. ತುರ್ತು ಸಂದರ್ಭದಲ್ಲಿ ಗಾಳಿ ಊದುವ ಮೂಲಕ ಬಳಸುವ ದೋಣಿ ಇದೆ. ಆದರೆ ಅದರಲ್ಲಿ ತೂತು ಬಿದ್ದಿರುವುದರಿಂದ ಬಳಸಲು ಸಾಧ್ಯವಿಲ್ಲ. ಈ ಬಗ್ಗೆ ಇಲಾಖೆಗೆ ದೂರು ನೀಡಿದ್ದೇವೆ. ಆದರೆ ಇಲಾಖೆಯಿಂದ ದೋಣಿ ವ್ಯವಸ್ಥೆಯಾಗಿಲ್ಲ ಎನ್ನುತ್ತಾರೆ.
ಅನಂತರ ಕುಂದಾಪುರದಿಂದ ಮುಳುಗು ತಜ್ಞರನ್ನು ಕರೆಯಿಸಿ ಮೃತರನ್ನು ಮೇಲೆತ್ತುವ ಕಾರ್‍ಯಾಚರಣೆ ನಡೆಸಲಾಯಿತು. ಮೃತ ರಾಮ ಅವಳಿ ಜವಳಿಯಾಗಿದ್ದು ಮದುವೆ ಬಳಿಕ ಅವಳಿ ಮಕ್ಕಳನ್ನು ಹೊಂದಿದ್ದ. ಘಟನೆಯಿಂದ ರಾಮನ ಕುಟುಂಬ ಆಘಾತಕ್ಕೊಳಗಾಗಿದೆ. ರಾಮನ ಪತ್ನಿಯ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಕೋಟ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply