Header Ads
Header Ads
Header Ads
Breaking News

ಹೆಜಮಾಡಿಯಲ್ಲಿ ಅವೈಜ್ಞಾನಿಕ ಕುಡಿಯುವ ನೀರಿನ ಕಾಮಗಾರಿ ಕಾಮಗಾರಿಗೆ ತಡೆಯೋಡ್ಡಿದ ಗ್ರಾಮಸ್ಥರು

ಹೆಜಮಾಡಿ ಸುಲ್ತಾನ್ ರಸ್ತೆಯಿಂದ ಪರಪಟ್ಟಕ್ಕೆ ಜಿಲ್ಲಾ ಪಂಚಾಯಿತಿ ಅನುದಾನ ಬಳಸಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂಬುದಾಗಿ ಆರೋಪಿಸಿದ ಗ್ರಾಮಸ್ಥರು ಕಾಮಗಾರಿಗೆ ತಡೆಯೋಡ್ಡಿದ್ದಾರೆ.

ಕುಂದಾಪುರ ರಾಜು ಪೂಜಾರಿ ಎಂಬವರು ಈ ಪೈಪ್‌ಲೈನ್ ಕಾಮಗಾರಿ ವಹಿಸಿಕೊಂಡಿದ್ದು, ಅವರು ಕಾಪುವಿನ ಉಮೇಶ್ ಎಂಬವರಿಗೆ ಒಳಗುತ್ತಿಗೆ ನೀಡಿ ಕಾಮಗಾರಿ ನಡೆಸುತ್ತಿದ್ದಾರೆ. ಒಂದು ಕಡೆಯಲ್ಲಿ ಪೈಪ್‌ಲೈನ್ ಮಳೆನೀರು ಹರಿದು ಹೋಗುವ ಚರಂಡಿಯಲ್ಲಿ ಹಾಕಲಾದರೆ, ಮತ್ತೊಂದು ಕಡೆ ಕಾಂಕ್ರೆಟ್ ರಸ್ತೆ ಹಾಗೂ ಸ್ಥಳೀಯ ನಿವಾಸಿಗಳ ಆವರಣಗೋಡೆಗಳಿಗೆ ಹಾನಿ ಮಾಡಿಕೊಂಡು ಪೈಪ್‌ಲೈನ್ ಅಳವಡಿಸುತ್ತಿದ್ದರು.

ಈ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಕಾಮಗಾರಿಗೆ ತಡೆಯೋಡ್ಡಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಈ ಭಾಗದ ಗ್ರಾಮ ಪಂಚಾಯಿತಿ ಸದಸ್ಯರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ಮಾದ್ಯಮಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ. ಸದಸ್ಯರು ನಮ್ಮ ಗಮನಕ್ಕೆ ತಾರದೆ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿನಲ್ಲಿ ವಿಚಾರಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿ.ಪಂ. ಇಂಜಿನಿಯರ್ ಸುನೀಲ್ ಎಂಬವರು ಪ್ರತಿಕ್ರಿಯಿಸಿ ಈ ಕಾಮಗಾರಿಯ ಬಗ್ಗೆ ಹೆಜಮಾಡಿ ಗ್ರಾ.ಪಂ. ಗಮನಕ್ಕೆ ತಂದಿದ್ದು, ಪಂ. ಉಪಾಧ್ಯಕ್ಷ ಸುಧಾಕರ್ ಕರ್ಕೇರ ಎಂಬವರು ಈ ಕಾಮಗಾರಿಯ ಬಗ್ಗೆ ನಿರ್ಧೇಶನ ನೀಡಿದ್ದಾರೆ ಎಂದಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಸ್ಥಳೀಯರೋರ್ವರು ತಮ್ಮ ಬಾವಿಯ ನೀರು ನೀಡುವುದಾಗಿ ತಿಳಿಸಿದ್ದು, ಇದೀಗ ಅವರು ನೀರು ನೀಡಲು ನಿರಾಕರಿಸಿದ್ದಾರೆ. ಆದರೂ ಅವರಲ್ಲಿ ಯಾವುದೇ ರೀತಿಯಲ್ಲಿ ಚರ್ಚಿಸದೆ ಈ ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ಇದು ಸರ್ಕಾರದ ಹಣವನ್ನು ಪೋಲು ಮಾಡುವ ಕಾರ್ಯಕ್ರಮ ವಿನಃ ಇದರಿಂದ ಯಾವುದೇ ಪ್ರಯೋಜನವಾಗದು ಎನ್ನುತ್ತಾರೆ ಸ್ಥಳೀಯರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply