Header Ads
Header Ads
Breaking News

ಹೆಜಮಾಡಿಯಲ್ಲಿ ಪೊದೆಯಲ್ಲಡಗಿದ ವಿದ್ಯುತ್ ಕಂಬಕ್ಕೆ ಮುಕ್ತಿ : ವಿ4 ನ್ಯೂಸ್ ವರದಿಗೆ ಸ್ಪಂದಿಸಿದ ಪಡುಬಿದ್ರಿ ಮೆಸ್ಕಾಂ ಇಲಾಖೆ

ಹೆಜಮಾಡಿ ಶಿವ ನಗರದಿಂದ ಬೊರ್‍ಗುಡ್ಡೆಗೆ ಹೋಗುವ ಸಂಪರ್ಕ ರಸ್ತೆಯ ಸಮೀಪ ಕೃಷಿಭೂಮಿಗೆ ತಾಗಿಕೊಂಡೇ ಇದ್ದ ವಿದ್ಯುತ್ ಕಂಬ ಪೊದೆಯಲ್ಲಿ ಅಡಗಿಕೊಂಡ ಬಗ್ಗೆ ವಿ4 ನ್ಯೂಸ್‍ನಲ್ಲಿ ವರದಿ ಬಿತ್ತರಿಸಲಾಗಿತ್ತು. ಈ ವರದಿಗೆ ಸ್ಪಂಧಿಸಿದ ಪಡುಬಿದ್ರಿ ಮೆಸ್ಕಾಂ ಪೊದೆಯನ್ನು ತೆರವುಗೊಳಿಸುವ ಮೂಲಕ ಜನರ ಸಮಸ್ಯೆಗೆ ಸ್ಪಂಧಿಸಿದೆ.

ಇದೇ ಕಂಬಕ್ಕೆ ಸಂಪರ್ಕ ಹೊಂದಿದ್ದ ತಂತಿಗಳು ಕೈ ಗೆಟಕುವ ಸ್ಥಿಯಲ್ಲಿ ಕೃಷಿಯ ಭೂಮಿಯ ಮಧ್ಯೆಭಾಗದಲ್ಲಿ ಹಾದು ಹೋಗಿ ಅಪಾಯ ಕೈ ಬೀಸಿ ಕರೆಯುತ್ತಿರುವ ಬಗ್ಗೆ ವರದಿಯಲ್ಲಿ ಕಾಣಿಸಿದ್ದು, ಆ ತಂತಿಗಳನ್ನು ಎಳೆದು ಕಟ್ಟುವ ಮೂಲಕ ಆ ಅಪಾಯಕಾರಿ ತಂತಿಗಳಿಗೂ ಮುಕ್ತಿ ದೊರಕಿದ್ದು, ಈ ಬಗ್ಗೆ ವಿ4ಗೆ ಮಾಹಿತಿ ನೀಡಿದ ಹೆಜಮಾಡಿ ಗ್ರಾ.ಪಂ. ಸದಸ್ಯ ಶಿವರಾಮ ಶೆಟ್ಟಿ, ವಿ4 ನ್ಯೂಸ್‍ನಲ್ಲಿ ವರದಿ ಪ್ರಸಾರಗೊಂಡ ಬಳಿಕ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿ ಅದೇಷ್ಟೋ ಸಮಯಗಳ ಹಿಂದಿನ ಸಮಸ್ಯೆಗೆ ಪಡುಬಿದ್ರಿ ಮೆಸ್ಕಾಂ ಮುಕ್ತಿ ನೀಡಿದ ಮೆಸ್ಕಾಂ ಇಲಾಖೆಗೂ ಹಾಗೂ ಈ ಸಮಸ್ಯೆಯ ಬಗ್ಗೆ ವರದಿ ಪ್ರಕಟಿಸಿ ಮೆಸ್ಕಾಂ ಇಲಾಖೆಯ ಕಣ್ಣು ತೆರೆಸಿದ ವಿ4 ನ್ಯೂಸ್ ಬಳಗಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ.

Related posts

Leave a Reply

Your email address will not be published. Required fields are marked *