Header Ads
Header Ads
Breaking News

ಹೆಜಮಾಡಿಯಲ್ಲಿ ವೀರ ಯೋಧರಿಗೆ ನಮನ : ನವಯುವಕರು ಸೈನ್ಯ ಸೇರುವ ಮೂಲಕ ದೇಶಭಕ್ತರಾಗಲು ಕರೆ

ಶ್ರೀನಗರದ ಪುಲ್ವಾಮ ಹೆದ್ದಾರಿಯಲ್ಲಿ ಪಾಕ್ ಪ್ರೇರಿತ ಉಗ್ರರಿಂದ ಅಮಾನುಶವಾಗಿ ವೀರ ಜವಾನರ ವೀರ ಮರಣದಿಂದ ದೇಶದ ಉದ್ದಗಲಕ್ಕೂ ವ್ಯಾಪಕ ಜನಾಕ್ರೋಷ ವ್ಯಕ್ತವಾಗಿದೆ. ಮಡಿದ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಇದಕ್ಕೆ ಪ್ರತೀಕಾರ ನೀಡುವ ಮೂಲಕ ನಮ್ಮ ದೇಶದ ಜವಾನರು ಪ್ರತ್ಯುತ್ತರ ನೀಡಬೇಕಾಗಿದೆ. ಅಲ್ಲದೆ ನಮ್ಮ ದೇಶದ ಯುವಕರು ಹೆಚ್ಚು ಹೆಚ್ಚು ಸೈನ್ಯಕ್ಕೆ ಸೇರುವ ಮೂಲಕ ದೇಶಕ್ಕಾಗಿ ವೀರ ಮರಣ ಹೊಂದಿದ ಜವಾನರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ ಹೇಳಿದರು.

ಅವರು ಹೆಜಮಾಡಿ ಜೂನಿಯರ್ ಕಾಲೇಜು ವಿಧ್ಯಾರ್ಥಿಗಳಿಂದ ಮಾನವ ಸರಪಳಿ ರಚಿಸಿ ದೇಶ ಭಕ್ತಿ ಗೀತೆ ಹಾಡುವ ಮೂಲಕ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಭೆಯಲ್ಲಿ ಹಿರಿಯರಾದ ರವೀಂದ್ರನಾಥ ಜಿ ಹೆಗ್ಡೆ, ದಲಿತ ಮುಖಂಡ ಶೇಖರ ಹೆಜಮಾಡಿ, ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ್ ಕರ್ಕೇರ, ಕಾಲೇಜಿನ ಪ್ರಾಂಶುಪಾಲ ಮತ್ತು ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

Leave a Reply

Your email address will not be published. Required fields are marked *