Header Ads
Header Ads
Breaking News

ಹೆಜಮಾಡಿಯ ಅವೈಜ್ಞಾನಿಕ ಟೋಲ್‌ಗೇಟ್,  ಸುಂಕ ಕಳ್ಳರಿಂದಾಗಿ ಒಳರಸ್ತೆ ಕೆಸರುಮಯ


ಹೆಜಮಾಡಿಯಲ್ಲಿ ಅವೈಜ್ಞಾನಿಕವಾಗಿ ಟೋಲ್‌ಗೇಟ್ ನಿರ್ಮಿಸಿದ್ದರಿಂದ ಟೋಲ್ ತಪ್ಪಿಸಲು ಒಳರಸ್ತೆಗಳನ್ನು ಹೆಚ್ಚಿನ ವಾಹನಗಳು ಬಳಸುತ್ತಿರುವುದರಿಂದ, ಒಳ ರಸ್ತೆ ಸಂಪೂರ್ಣ ಕೆಸರುಮಯವಾಗಿ ಪಾದಚಾರಿಗಳಿಗೆ ನಡೆದಾಡಲೂ ಅಸಾಧ್ಯ ಎಂಬಂತ್ತಾಗಿದೆ ಎಂಬುದಾಗಿ ಹೆಜಮಾಡಿ ಗ್ರಾ.ಪಂ. ಸದಸ್ಯ ಪ್ರಾಣೇಶ್ ಹೆಜಮಾಡಿ ಆರೋಪಿಸಿದ್ದಾರೆ.
ಎಲ್ಲೋ ಮಾಡಬೇಕಾಗಿದ್ದ ಟೋಲ್‌ಗೇಟನ್ನು ಎಲ್ಲೋ ಮಾಡಿದ್ದರಿಂದ, ಟೋಲ್ ನೀಡುವುದನ್ನು ತಪ್ಪಿಸುವುದಕ್ಕಾಗಿ ಲಘು ವಾಹನಗಳು ಸಹಿತ ಘನ ವಾಹನಗಳು ಒಳ ರಸ್ತೆಯನ್ನೇ ಬಳಸಿದ್ದರಿಂದ, ಪಿಡಬ್ಲ್ಯೂಡಿ ರಸ್ತೆಯಲ್ಲಿದ್ದ ಕಿರು ಮೋರಿಯೊಂದು ಕುಸಿದು ಬಿದ್ದಿದೆ. ಆ ಸಂದರ್ಭ ಸ್ಥಳೀಯ ವಾಹನಗಳ ಸಂಚಾರಕ್ಕಾಗಿ ಹೆಜಮಾಡಿಯಿಂದ ಗುಂಡಿಗೆ ಹೋಗುವ ಇಕ್ಕಾಟ್ಟಾದ ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಯಿತು. ಆದರೆ ಈ ಕಿರಿದಾದ ರಸ್ತೆಯನ್ನೂ ಬಿಡದ ಟೋಲ್ ವಂಚನೆಗಾರರು ಅದೇ ರಸ್ತೆಯನ್ನು ಬಳಕೆ ಮಾಡುತ್ತಿರುವುದರಿಂದ ರಸ್ತೆಯ ಸ್ಥಿತಿ ಹೇಳತೀರದು. ಇಲ್ಲಿನ ರಸ್ತೆಯ ದುಸ್ಥಿತಿಯ ಬಗ್ಗೆ ವಾಹನ ಚಾಲಕರಿಗೆ ಮನದಟ್ಟು ಮಾಡಿ ಈ ಭಾಗದಿಂದ ಬರುವುದಕ್ಕೆ ಆಕ್ಷೇಪಿಸಿದರೆ ನಮ್ಮ ಮೈಮೇಲೆ ಬರುತ್ತಾರೆ, ಒಂದು ಕಡೆಯಿಂದ ವಾಹನ ಚಾಲಕರ ಗೂಂಡಾಗಿರಿಯಾದರೆ ಮತ್ತೊಂದು ಕಡೆ ಈ ರಸ್ತೆಯ ದುಸ್ಥಿತಿಯಿಂದ ಅನಿರ್ವಾಯವಾಗಿ ಆಕ್ರೋಶಗೊಂಡ ಗ್ರಾಮಸ್ಥರ ಬೈಗುಳ ಒಟ್ಟಾರೆಯಾಗಿ ಗ್ರಾ.ಪಂ.ನ್ನೇ ಜನರು ಗುರಿಯಾಗಿಟ್ಟುಕೊಂಡು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎನ್ನುತ್ತಾರೆ ಪ್ರಾಣೇಶ್.
ಈ ರಸ್ತೆ ಬೃಹತ್ ಹೊಂಡಗಳಿಂದ ಕೂಡಿದ್ದಲ್ಲದೆ ಕೆಸರು ಗದ್ದೆಯ ರೂಪ ತಾಳಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಸಮಸ್ಯೆ ಅನುಭವಿಸುವಂತ್ತಾಗಿದೆ. ಈ ಬಗ್ಗೆ ಮೋರಿ ನಿರ್ಮಾಣಕ್ಕಾಗಿ ರಸ್ತೆ ಮುಚ್ಚಿದ ಪಿಡಬ್ಲ್ಯೂಡಿ ಇಲಾಖೆ, ವಾಹನ ಸಂಚಾರಕ್ಕಾಗಿ ಬದಲಿ ವ್ಯವಸ್ಥೆ ಕಲ್ಪಿಸದಿರುವುದರಿಂದ ಈ ದುಸ್ಥಿತಿ ಬಂದೊಗಿದೆ. ಈ ಸಮಸ್ಯೆ ದೊಡ್ಡ ಸಮಸ್ಯೆಯಾಗಿರಲಿಲ್ಲ. ಇದನ್ನು ದೊಡ್ಡದಾಗುವಂತೆ ಮಾಡಿದ್ದು ಸ್ಥಳೀಯ ಹೆಜಮಾಡಿ ಗ್ರಾಮ ಪಂಚಾಯಿತಿಯ ೨೧ ಮಂದಿ ಸದಸ್ಯರು. ಈ ಬಗ್ಗೆ ಒಂದು ಗುಂಪು ಒಂದು ನಿರ್ಣಯ ಕೈಗೊಂಡರೆ ಮತ್ತೊಂದು ಗುಂಪು ಅದನ್ನು ವಿರೋಧಿಸುವ ಮೂಲಕ ರಾಜಕೀಯ ಮೇಲುಗೈಗೆ ಮುಂದಾಗಿರುವುದೇ ಈ ರಾದ್ಧಾಂತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಗ್ರಾಮಸ್ಥ ತಾರನಾಥ ಭಟ್.

Related posts

Leave a Reply